‘The Kashmir Files ‘ ವೀಕ್ಷಣೆಗೆ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ ಅಸ್ಸಾಂ ಸರ್ಕಾರ
ಮಾರ್ಚ್ 11 ರಂದು ಸಾಕಷ್ಟು ವಿವಾದಗಳ ನಂತರ ಇಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿರೋದು ಒಂದೆಡೆಯಾದ್ರೆ , ಇಡೀ ಭಾರತೀಯರನ್ನ ಒಗ್ಗೂಡಿಸುತ್ತಿದೆ.. ಥಿಯೇಟರ್ ಗಳ ಮುಂದೆ ಜನ ಮುಗಿಬಿದ್ದು ಜಮಾಯಯಿಸುತ್ತಿದ್ದಾರೆ.. ಎಷ್ಟೋ ಕಡೆಗಳಲ್ಲಿ ಸಿನಿಮಾ ಟೆಕೆಟ್ ಗಳು ಸಿಗದೇ ನಿರಾಶಿತರಾಗುತ್ತಿದ್ದಾರೆ..
ಸಿನಿಮಾದಲ್ಲಿ ದಶಕಗಳ ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತೋರಿಸಲಾಗಿದೆ.
ಕೆಲವರು ಈ ಸಿನಿಮಾವನ್ನ ‘ಪ್ರೊಪಾಗಾಂಡಾ’ ಸಿನಿಮಾ ಎಂದು ಕರೆದಿದ್ದಾರೆ. ಸಿನಿಮಾ ಬಗ್ಗೆ ಅನೇಕಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಇದೇ ಸಿನಿಮಾದ ಚರ್ಚೆ ಜೋರಾಗಿದೆ.
ಈ ನಡುವೆ ಸಿನಿಮಾಗೆ ರಾಜ್ಯ ಸರ್ಕಾರಗಳೂ ಬೆಂಬಲ ಸೂಚಿಸುತ್ತಿವೆ.. ಗುಜರಾತ್ , ಮಧ್ಯಪ್ರದೇಶ , ಕರ್ನಾಟಕ ಸರ್ಕಾರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಇಗೆ ವಿನಾಯಿತಿ ಘೋಷಣೆ ಮಾಡಲಾಗಿದೆ..
ಇದೀಗ ಅಸ್ಸಾಂ ಸರ್ಕಾರವು ‘The Kashmir Files’ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಘೋಷಣೆ ಮಾಡಿದೆ.. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈ ಘೋಷಣೆ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಅವರು ಸಿನಿಮಾವನ್ನು ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆಗೆ ಕೊಡಲಾಗುತ್ತಿದೆ. ಈ ಘೋಷಣೆಯನ್ನು ಮಾಡಲು ತುಂಬಾ ಸಂತೋಷವಾಗಿದೆ. ಈ ಬಗ್ಗೆ ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಸಿನಿಮಾಗೆ ಹೋಗಿದ್ದ ಟಿಕೆಟ್ಗಳನ್ನು ಮರುದಿನ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ..
Glad to announce that our Govt employees will be entitled for half-day special leave to watch #TheKashmirFiles.
They will have to only inform their superior officers and submit the tickets the next day. pic.twitter.com/RNQzOk9iCK
— Himanta Biswa Sarma (Modi Ka Parivar) (@himantabiswa) March 15, 2022
ಅಷ್ಟೇ ಅಲ್ದೇ ಅಸ್ಸಾಂ ಸಿಎಂ ಸಂಪುಟದೊಂದಿಗೆ ಗುವಾಹಟಿಯ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಿದ್ದರು. ಈ ಬಗ್ಗೆ ಮಾತನಾಡಿ ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯವು ಮಾನವೀಯತೆಯ ಮೇಲೆ ದೊಡ್ಡ ಕಳಂಕ ಎಂದು ಹೇಳಿದ್ದರು.
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರನ್ನು ಓಡಿಸಿರುವ ರೀತಿ ಮಾನವೀಯತೆಯ ಮೇಲೆ ಕಳಂಕವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಜನರ ದುಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರೀಸಲಾಗಿದೆ. ಇದನ್ನು ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು @BJP4Assam ಮತ್ತು ಮಿತ್ರಪಕ್ಷಗಳ ಶಾಸಕರೊಂದಿಗೆ ವೀಕ್ಷಿಸಿದ್ದೇನೆ ಎಂದು ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದರು..
ವಿವೇಕ್ ಅಗ್ನಿಹೋತ್ರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು 1980 ಮತ್ತು 90 ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಆಧರಿಸಿದೆ.
ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ತೆಲುಗು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಹ-ನಿರ್ಮಾಣ ಮಾಡಿದ್ದಾರೆ.
ಮಾರ್ಚ್ 11 ರಂದು ದೇಶಾದ್ಯಂತ ಬಿಡುಗಡೆಯಾದ ಈ ಮೂವಿ ಭರ್ಜರಿ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲ ಕಲೆಕ್ಷನ್ ಗಳ ಮಳೆಯೂ ಸುರಿಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಚಿತ್ರ ನೋಡಿ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮಾತ್ರವಲ್ಲ ಚಿತ್ರರಂಗದ ದಿಗ್ಗಜರು, ಹಲವು ಗಣ್ಯರು ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.