Surya – Bala : ವರ್ಷಗಳ ನಂತರ ನಾಲ್ಕನೇ ಸಿನಿಮಾಗೆ ಒಂದಾಗ್ತಿರುವ ಜೋಡಿ
ಬಾಲ ಅವರ ನಿರ್ದೇಶನದ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ..
ನಿರ್ದೇಶಕ ಬಾಲಾ ಅವರೊಂದಿಗಿನ ಮುಂಬರುವ ಚಿತ್ರದಲ್ಲಿ ಸೂರ್ಯ ನಟಿಸುತ್ತಿರುವುದು ಈಗಾಗಲೇ ಘೋಷಣೆಯಾಗಿದೆ.. ಈ ಮೂಲಕ ಬರೋಬ್ಬರಿ 11 ವರ್ಷಗಳ ನಂತರ ಈ ಜೋಡಿ ನಾಲ್ಕನೇ ಬಾರಿಗೆ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ..
ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿತ್ತು. ಶ್ರವಣ ಮತ್ತು ಮಾತಿನ ದೋಷವಿರುವ ಪಾತ್ರವೊಂದರಲ್ಲಿ ಇವರು ನಟಿಸಲಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದ್ರೆ ಇದೀಗ ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದು ಆಪ್ತ ಮೂಲವೊಂದು ಬಹಿರಂಗಪಡಿಸಿದೆ.
ವರದಿ ಪ್ರಕಾರ “ಸೂರ್ಯ ಅವರು ಚಿತ್ರದಲ್ಲಿ ಕೇವಲ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೃತಿ ಶೆಟ್ಟಿ ಅವರು ಸೂರ್ಯಗೆ ನಾಯಕಿಯಾಗಲಿದ್ದಾರೆ. ಮಾಲಿವುಡ್ ನಟಿ ಮಮಿತಾ ಬೈಜು ಅವರ ಸಹೋದರಿಯಾಗಿ ನಟಿಸುತ್ತಿದ್ದಾರೆ.
ಇದರಲ್ಲಿ ಅವರದ್ದೂ ಸಹ ಪ್ರಮುಖ ಪಾತ್ರವಿರಲಿದೆ ಎನ್ನಲಾಗ್ತಿದೆ.. ಚಿತ್ರತಂಡ ಕನ್ಯಾಕುಮಾರಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಮುಂದೆ ಮಧುರೈಗೆ ತೆರಳಲಿದೆ.
ಇದು ಕನಿಷ್ಠ 40 ದಿನಗಳ ಶೂಟಿಂಗ್ ಶೆಡ್ಯೂಲ್ ಹೊಂದಿದ್ದು ಇದಾದ ನಂತರ ಅವರು ಗೋವಾಕ್ಕೆ ತೆರಳಲಿದೆ ಸಿನಿಮಾ ತಂಡ ಎಂಬ ಮಾಹಿತಿ ಸಿಕ್ಕಿದೆ..