KGF verse ….. ಏನಿದು..?? ಡಿಜಿಟಲ್ ದುನಿಯಾದಲ್ಲಿ ರಾಕಿ ಭಾಯ್ ಪ್ರಪಂಚ…!!!
KGF 2 ಸಿನಿಮಾ ದೇಶಾದ್ಯಂತ ಹವಾ ಸೃಷ್ಟಿಸಿದೆ.. ಈ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ… ಇನ್ನೂ ಸಿನಿಮಾ ರಿಲೀಸ್ ಉಳಿದಿರುವುದು 5 ದಿನಗಳು ಮಾತ್ರವೇ…. ಥಿಯೇಟರ್ ಗಳ ಮುಂದೆ ರಾಕಿ ಭಾಯ್ ಕಟೌಟ್ ಗಳು ತಲೆ ಎತ್ತಲಿವೆ…
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ.. ಇತ್ತೀಚೆಗೆ ಮುಂಬೈಗೆ ತೆರಳಿ ಪ್ರಚಾರ ಮಾಡಿದ ರಾಕಿ ಭಾಯ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದರು… ಸಿನಿಮಾ ತಂಡ ಪ್ರಮೋಷನ್ ಗೆ ವಿಭಿನ್ನ ಸ್ಟ್ರಾಟಜಿಗಳನ್ನ ಬಳಸಿಕೊಳ್ತಿದೆ..
#Metaverse is going to be Rocky Bhai's world soon.
Get ready for a grand entry.
Stay tuned as the sale goes live on April 7th.#KGFVerse: https://t.co/S1nl4zLPiD#KGFChapter2 @TheNameIsYash @prashanth_neel @VKiragandur @hombalefilms pic.twitter.com/8qCiQXjvDg— Hombale Films (@hombalefilms) March 30, 2022
ಅಂದ್ಹಾಗೆ ಡಿಫರೆಂಟ್ ಆದ್ರೆ ನೆಕ್ಸ್ಟ್ ಲೆವೆಲ್ ಪ್ರಚಾರ ತೆಗೆದುಕೊಂಡಿರುವ ಸಿನಿಮಾತಂಡ ,, ಮಾರ್ಕೆಂಟಿಗ್ ಸ್ಟ್ರಾಟಜಿಯನ್ನೂ ಪ್ರಚಾರದ ಭಾಗವಾಗಿಸಿಕೊಂಡಿದೆ.. ಅಂದ್ಹಾಗೆ ಸಿನಿಮಾ ತಂಡ ಮೆಟಾ ವರ್ಸ್ ಅಂದ್ರೆ KGF ವರ್ಸ್ ರಿಲೀಸ್ ಮಾಡ್ತಿದೆ.. ಇದೊಂದು ರೀತಿ ಹೊಸದು,.. ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೂ ಹೊಸದು.. ಇಲ್ಲಿ ಯಶ್ ಅಭಿಮಾನಿಗಳು ರಾಕಿ ಭಾಯ್ ದುನಿಯಾಗೆ ವರ್ಚುವಲ್ ಆಗಿ ಎಂಟ್ರಿ ಕೊಡಬಹುದಾಗಿದೆ.. ಅಂದ್ಹಾಗೆ ಈಗಾಗಲೇ ಕೆಜಿಎಫ್ ವರ್ಸ್ ಸೇಲ್ ಆರಂಭವಾಗಿದೆ.
RRR : 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ : 1000 ಕೋಟಿ ಕ್ಲಬ್ ಸೇರಿತಾ..??
ಅಂದ್ಹಾಗೆ ಏನಿದು ಮೆಟಾ ವರ್ಸ್…. ಹೇಗಿರಲಿದೆ… ಅನ್ನೋ ಕ್ಯೂರಿಯಾಸಿಟಿ ಜನರಿಗಿದೆ.. ಅಂದ್ಹಾಗೆ ಮೆಟಾ ವರ್ಸ್ ಒಂದು ಡಿಜಿಟಲ್ ಪ್ರಪಂಚ… ಈ ಜಜಗತ್ತಿನಲ್ಲಿ ಗೇಮ್ಸ್ ಆಡಬಹುದು, ಶಾಪಿಂಗ್ ಮಾಡಬಹುದು. ಬೇರೆ ಎಲ್ಲೋ ಇರುವ ಸ್ನೇಹಿತರನ್ನೂ ಸಹ ಭೇಟಿ ಮಾಡಬಹುದು. ಇದೇ ಮೆಟಾ ವರ್ಸ್ ಪ್ರಪಂಚಕ್ಕೆ ಎಂಟ್ರಿಕೊಟ್ಟಿರುವ ಕೆಜಿಎಫ್ ದುನಿಯಾ ಅಭಿಮಾನಿಗಳನ್ನೂ ತಮ್ಮ ಪ್ರಪಂಚದೊಳಗೆ ಎಂಟ್ರಿಕೊಡಲು ಅವಕಾಶ ನೀಡ್ತಿದೆ..
ಕೆಜಿಎಫ್ ವರ್ಸ್ ಅನ್ನೋದು ಒಂದು ಡಿಜಿಟಲ್ ಅವತಾರ. ಯಶ್ ಅಭಿಮಾನಿಗಳಿಗಾಗಿಯೇ ಹೊಸ ಪ್ರಪಂಚವೊಂದನ್ನು ಸೃಷ್ಟಿ ಮಾಡುತ್ತಿದೆ. ರಾಕಿ ಭಾಯ್ ದುನಿಯಾದಲ್ಲಿ ಅವರ ಅಭಿಮಾನಿಗಳು ವರ್ಚುವಲ್ ಆಗಿ ಗೇಮ್ ಆಡಲು ಅವಕಾಶ ಮಾಡಿಕೊಡಲಿದ್ದಾರೆ. ಆದ್ರೆ ರಾಕಿ ಬಾಯ್ ದದುನಿಯಾಗೆ ಪ್ರವೇಶ ಮಾಡಬೇಕಾದ್ರೆ ‘ಎಲ್ಡೊರಾಡೋ’ ಟೋಕನ್ ಗಳನ್ನು ಖರೀದಿ ಮಾಡಬೇಕು..