ಕಮಲ್ ಹಾಸನ್ ನಟನೆಯ ವಿಕ್ರಂ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸೂರ್ಯ ನಟನೆಯ ರೋಲೆಕ್ಸ್ ಕ್ಯಾರೆಕ್ಟರ್ ಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
ಈ ಕ್ರಿಡಿಟ್ ಕಂಪ್ಲೀಟ್ ಆಗಿ ನಿರ್ದೇಶಕ ಲೋಕೇಶ್ ಕನಕರಾಜು ಅವರಿಗೆ ಸಲ್ಲುತ್ತದೆ.
ಅಂದಹಾಗೆ ವಿಲನ್ ನಲ್ಲಿ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಆದ್ರೆ ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ಅದ್ಭುತವಾಗಿ ಕಾಣಿಸಿಕೊಂಡರು. ಅಲ್ಲದೇ ಸೂರ್ಯ ಪಾತ್ರವನ್ನು ಯಾರಿಗೂ ತಿಳಿಯದಂತೆ ಶೂಟ್ ಮಾಡಿದ್ದರು.
ಒಂದೇ ಒಂದು ಫೋಟೋ ಕೂಡ ಲೀಕ್ ಆಗದಂತೆ ನೋಡಿಕೊಂಡರು.
ವಿಕ್ರಂ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸೂರ್ಯ ಒಟ್ಟಾರೆ ಸಿನಿಮಾದ ಹೈಲೆಟ್ ಆಗಿರುತ್ತಾರೆ.
ರಗ್ಗಡ್ ಲುಕ್, ರಕ್ತಸಿಕ್ತವಾಗಿ ಸೂರ್ಯ ಲುಕ್ ನಲ್ಲಿ ಸೂರ್ಯ ಫುಲ್ ಮಾಸ್ ಆಗಿ ಕಾಣಿಸಿಕೊಂಡರು.
ಈ ಹಿನ್ನೆಲೆಯಲ್ಲಿ ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ರೋಲೆಕ್ಸ್, ರೋಲೆಕ್ಸ್ ಸರ್ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಇನ್ನು ತನ್ನ ಲುಕ್ ಹಿಂದೆ ಯಾರಿದ್ದಾರೆ ಎಂದು ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಸೆರೆನಾ ಟಿಕ್ಸಿರಾ ಅವರು ಸೂರ್ಯ ಲುಕ್ ಡಿಸೈನ್ ಮಾಡಿದ್ದಾರೆ. ಇದನ್ನ ಸೂರ್ಯ ಇನ್ ಸ್ಟಾದಲ್ಲಿ ತಿಳಿಸಿದ್ದಾರೆ.