ಕಿರುತೆರೆ ನಟಿ ಅಮೃತಾ ರೂಪೇಶ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.. ಅಭಿಮಾನಿಗಳು , ಆಪ್ತರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಅಮೃತಾ ರೂಪೇಶ್ ಅವರು ಇತ್ತೀಚೆಗೆ ಅಷ್ಟೇ ತಮ್ಮ 7 ವರ್ಷದ ಮಗಳು ಸಮನ್ವಿಯನ್ನ ಕಳೆದುಕೊಂಡಿದ್ದರು.. ಆ ನಂತರದಲ್ಲಿ ಅವರ ಮಕನೆಯಲ್ಲಿ ದುಃಖ ತುಂಬಿಕೊಂಡಿತ್ತು.. ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು.. ಇದೀಗ ಅವರ ಮನೆಯಲ್ಲಿ ಮತ್ತೆ ಖುಷಿಯ ಆಗಮನವಾಗಿದೆ..
ನಟಿ ಅಮೃತಾ ರೂಪೇಶ್ ಜುಲೈ 2 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆಗಮನದ ಖುಷಿಯ ವಿಚಾರವನ್ನು ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.