ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ತಮಿಳಿನ ರೀಮೇಕ್ ಸಿನಿಮಾ #Vikram Vedha ಪ್ರಸ್ತುತ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದು.. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ..
ಆದ್ರೆ ಈ ಸಿನಿಮಾದ ಚಿತ್ರೀಕರಣ ಯುಪಿಯಲ್ಲಿ ನಡೆಯುವುದಕ್ಕೆ ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಹರಿದಾಡ್ತಿದೆ.. ಆದ್ರೆ ತಯಾರಕರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದು ಗೊಂದಲಗಳಿಗೆ ತೆರೆ ಎಳೆದಿದ್ಧಾರೆ.. ಈ ಸಿನಿಮಾವನ್ನ ಸಂಪೂರ್ಣವಾಗಿ ಭಾರತದಲ್ಲಿ ಚಿತ್ರೀಕರಿಸಿರೋದಾಗಿ ಸಿನಿಮಾತಂಡ ತಿಳಿಸಿದೆ..
“ವಿಕ್ರಮ್ ವೇದಾ ಶೂಟಿಂಗ್ ಸ್ಥಳಗಳ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡುತ್ತಿವೆ.. ಇವು ಸಂಪೂರ್ಣವಾಗಿ ಆಧಾರರಹಿತ ವರದಿಗಳಾಗಿವೆ… ಲಕ್ನೋ ಸೇರಿದಂತೆ ಭಾರತದಲ್ಲಿ ವಿಕ್ರಮ್ ವೇದ ಸಿನಿಮಾವನ್ನ ಚಿತ್ರೀಕರಿಸಲಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 2021 ರ ಅಕ್ಟೋಬರ್-ನವೆಂಬರ್ ನ ಸಮಯದಲ್ಲಿ ಚಿತ್ರದ ಒಂದು ಭಾಗವನ್ನು ಚಿತ್ರೀಕರಿಸಲಾಗಿದೆ. ಕಾರಣ ಜೈವಿಕ-ಬಬಲ್ ಗೆ ಮೂಲ ಸೌಕರ್ಯವನ್ನು ಒದಗಿಸುವ ಏಕೈಕ ಸ್ಥಳವದಾಗಿತ್ತು.. ಅಂತಹ ಪ್ರಮಾಣದ ಸಿಬ್ಬಂದಿಗೆ ಸ್ಥಳಾವಕಾಶ ನೀಡಿತು, ಹಿಂದಿನ ತಿಂಗಳುಗಳ ಚಿತ್ರೀಕರಣದ ಸಮಯದಲ್ಲಿ ಸ್ಟುಡಿಯೊದಲ್ಲಿ ಸೆಟ್ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿತು. ನಾವು ಆರೋಗ್ಯ ಮತ್ತು ಪ್ರೋಟೋಕಾಲ್ ಕಾಳಜಿಯಿಂದ ಅಲ್ಲಿ ಶೂಟ್ ಮಾಡಲು ಆಯ್ಕೆ ಮಾಡಿಕೊಂಡಿದ್ದೆವು, ಈ ಸತ್ಯಗಳನ್ನು ತಿರುಚುವ ಯಾವುದೇ ಪ್ರಯತ್ನವು ಸ್ಪಷ್ಟವಾಗಿ ಅಸತ್ಯವಾಗಿದೆ’’ ಎಂದು ಸ್ಪಷ್ಟಪಡಿಸಿದ್ದಾರೆ..
ಅಲ್ಲದೇ “ನಾವು ರಿಲಯನ್ಸ್ ಎಂಟರ್ಟೈನ್ಮೆಂಟ್ನಲ್ಲಿ ಸೃಜನಾತ್ಮಕ ಪ್ರತಿಭೆಗಳಿಂದ ಸಲಹೆಗಳನ್ನು ಸ್ವಾಗತಿಸುವಾಗ, ಉತ್ಪಾದನೆ ಮತ್ತು ಬಜೆಟ್ ನಿರ್ಧಾರಗಳು ಕೇಂದ್ರೀಕೃತ ವಿಶೇಷವಾಗಿದೆ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಸಿನಿಮಾ ಸೆಪ್ಟೆಂಬರ್ 30, 2022 ರಂದು ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ..