ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಯಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟ ಸುಶಾಂತ್ ಸಿಂಗ್ ಗೆ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ನೀಡಿದ್ದಳು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬುಧವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ನಟಿ ರಿಯಾ ಚಕ್ರವರ್ತಿ ಸಹ ಆರೋಪಿಗಳಿಂದ ‘ಗಾಂಜಾ’ವನ್ನು ಪಡೆದಿದ್ದಾರೆ. ಈಕೆಯ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ರಿಯಾ ಚಕ್ರವರ್ತಿ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಹಸ್ತಾಂತರಿಸಿದ್ದಾರೆ ಎಂದು ಎನ್ ಸಿಬಿ ಆರೋಪಿಸಿರುವುದಾಗಿ ವರದಿ ಮಾಡಿದೆ.
NCB ಆರೋಪ ಪಟ್ಟಿಯಲ್ಲಿ ರಿಯಾ ಸಹೋದರ ಶೋವಿಕ್ ಸೇರಿದಂತೆ 35 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಜುಲೈ 27ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ನಟಿ ರಿಯಾ ಚಕ್ರವರ್ತಿ ತಪ್ಪಿತಸ್ಥಳೆಂದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದು.
14 ಜೂನ್ 2020 ರಂದು, ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಅವರ ಮುಂಬೈ ಮನೆಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಕುಟುಂಬದವರು ರಿಯಾ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದರು . ರಿಯಾ ಮತ್ತು ಸುಶಾಂತ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದರು. ಸುಶಾಂತ್ ಸಾಯುವ ಒಂದು ವಾರದ ಮೊದಲು ರಿಯಾ ಚಕ್ರವರ್ತಿ ಮನೆ ತೊರದಿದ್ದರು.
ರಿಯಾ ಚಕ್ರವರ್ತಿ ಮತ್ತು ಆತನ ಸಹೋದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಡ್ರಗ್ಸ್ ವಿಚಾರ ಪ್ರವೇಶ ಪಡೆದ ನಂತರ ಎನ್ಸಿಬಿ ತನಿಖೆ ಕೈಗೆತ್ತಿಕೊಂಡಿತ್ತು..