ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಸಂಚಲನ ಸೃಷ್ಠಿ ಮಾಡಿರುವ ಪ್ರಶಾಂತ್ ನೀಲ್, ಇದೀಗ ತೆಲುಗು ಸ್ಟಾರ್ ಗಳ ಸುತ್ತ ಸುತ್ತುತ್ತಿದ್ದಾರೆ.
ಟಾಲಿವುಡ್ ಸ್ಟಾರ್ ಗಳ ಕಾಲ್ ಷೀಟ್ ಪಡೆಯುವುದರ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಹೀಗಾಗಿ ಒಂದು ರೌಂಡ್ ಎಲ್ಲಾ ತೆಲುಗು ಸ್ಟಾರ್ ಗಳ ಜೊತೆ ಮಾತುಕತೆ ಮುಗಿಸಿದ್ದಾರೆ ಪ್ರಶಾಂತ್.
ಹೌದು..! ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಯಾರೂ ಊಹಿಸದ ರೀತಿಯಲ್ಲಿ ತೆಲುಗು ಕಡೆ ವಾಲಿದ್ದಾರೆ. ಸಲಾರ್ ಅಂತಾ ಟಾಲಿವುಡ್ ಕಡೆ ಮುಖಮಾಡಿದ ಪ್ರಶಾಂತ್ ಅದಾದ ಬಳಿಕವಾದ್ರೂ ಕನ್ನಡ ಹೀರೋಗಳ ಜೊತೆ ಸಿನಿಮಾ ಮಾಡ್ತಾರೆ ಅಂದುಕೊಳ್ಳಲಾಗಿತ್ತು. ಆದ್ರೆ ಪ್ರಶಾಂತ್ ನೀಲ್, ಕನ್ನಡದತ್ತ ಹೆಜ್ಜೆ ಹಾಕುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಯಾಕಂದರೇ ಪ್ರಶಾಂತ್ ನೀಲ್ ಈಗಾಗಲೇ ತೆಲುಗು ಸಿನಿಮಾ ಇಂಡಸ್ಟ್ರೀಯ ಎಲ್ಲಾ ಸ್ಟಾರ್ ನಟರ ಜೊತೆ ಒಂದು ಬಾರಿ ಮಾತುಕತೆ ನಡೆಸಿದ್ದಾರೆ. ಮೊದಲು ಜ್ಯೂನಿಯರ್ ಎನ್ ಟಿಆರ್ ಜೊತೆ ಮಾತನಾಡಿದ್ದ ಪ್ರಶಾಂತ್, ಬಳಿಕ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಕಥೆ ಬಗ್ಗೆ ಮಾತನಾಡಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮೆಗಾ ಪವರ್ ಸ್ಟಾರ್ ಮನೆಗೆ ತೆರಳಿದ್ದ ಪ್ರಶಾಂತ್, ಅಲ್ಲೂ ಕೂಡ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಯಾವ ನಟರೂ ಪ್ರಶಾಂತ್ ನೀಲ್ ಸದ್ಯಕ್ಕೆ ಸಿನಿಮಾ ಮಾಡದೇ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರಂತೆ. ಕೆಜಿಎಫ್ – 2, ಸಲಾರ್ ಸಿನಿಮಾ ನೋಡಿಕೊಂಡು ಕಾಲ್ ಷೀಟ್ ಕೊಡೊ ಬಗ್ಗೆ ಚಿಂತನೆ ನಡೆಸಿದ್ದಾರಂತೆ.