ಈ ಹಿಂದೆ ಕಾಲವೊಂದಿತ್ತು ಭಾರತೀಯ ಸಿನಿಮಾ ಇಂಡಸ್ಟ್ರೀ ಅಂದರೇ ಅದು ಕೇವಲ ಹಿಂದಿ ಸಿನಿಮಾ ಚಿತ್ರರಂಗಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿತ್ತು. ದೇಶ ವಿದೇಶಗಳಲ್ಲೂ ಹಿಂದಿ ಸಿನಿಮಾಗಳು ಅಬ್ಬರಿಸುತ್ತಿದ್ದವು. ಇಂಡಿಯನ್ ಸಿನಿಮಾ ಅಂದ್ರೆ ಅದು ಹಿಂದಿ ಸಿನಿಮಾ ಇಂಡಸ್ಟ್ರಿ ಎಂದು ಹೇಳಲಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದೆ.
ಹಿಂದಿ ಸಿನಿಮಾಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಸೌತ್ ಸಿನಿಮಾಗಳು ಟಕ್ಕರ್ ನೀಡುತ್ತಿವೆ. ಬಾಲಿವುಡ್ ಮಂದಿ ಕೂಡ ಹೌರಾ ಎನ್ನುವಂತೆ ಮಾಡುತ್ತಿವೆ ಸೌತ್ ಸಿನಿಮಾಗಳು. ಹೀಗಾಗಿಯೇ ಹಿಂದಿಯ ಹೆಸರಾಂತ ಸಿನಿಮಾ ನಿರ್ದೇಶಕರೂ, ಸಿನಿಮಾ ನಿರ್ಮಾಣ ಸಂಸ್ಥೆಗಳು ಇದೀಗ ಸೌತ್ ಕಡೆ ವಾಲುತ್ತಿವೆ.
ಈಗಾಗಲೇ ಪ್ರಭಾಸ್ ಜೊತೆ ಸಿನಿಮಾಗಳನ್ನು ಮಾಡುತ್ತಿರುವ ಹಿಂದಿ ಮಂದಿ, ಇದೀಗ ಮತ್ತೊಬ್ಬ ಸೌತ್ ಸ್ಟಾರ್ ಗಾಗಿ ಅಪ್ರೊಚ್ ಮಾಡುತ್ತಿವೆ.
ಇದೀಗ ಆ ಸರದಿಯಲ್ಲಿ ಬಾಲಿವುಡ್ ಸಿನಿಮಾ ಮಾಂತ್ರಿಕ ಸಂಜಯ್ ಲೀಲಾ ಬನ್ಸಾಲಿ ನಿಂತಿದ್ದು, ಅವರು ಅಪ್ರೊಚ್ ಆಗಿರುವ ನಟ ಜ್ಯೂನಿಯರ್ ಎನ್‍ಟಿಆರ್.
ಹೌದು..! ಸಂಜಯ್ ಲೀಲಾ ಬನ್ಸಾಲಿ ಅವರು ಎನ್ ಟಿ ಆರ್ ಜೊತೆ ಭಾರಿ ಬಜೆಟ್‍ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಎನ್ ಟಿ ಆರ್ ಆಕ್ಟಿಂಗ್ ಸ್ಕೀಲ್ಸ್ ಗೆ ಇಂಪ್ರೆಸ್ ಆಗಿರುವ ಬನ್ಸಾಲಿ, ಅವರ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆಯನ್ನು ಅವರೊಂದಿಗೆ ಮಾಡಿ ಮುಗಿಸಿದ್ದಾರೆ. ಅಲ್ಲದೆ ಎನ್ ಟಿ ಆರ್ ಅವರು ಕೂಡ ಬನ್ಸಾಲಿ ಅವರ ಜೊತೆಯಲ್ಲಿ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಹೀಗಾಗಿ ಮುಂದಿನ ವರ್ಷದ ಮಧ್ಯಂತರದಲ್ಲಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಇರುತ್ತದೆ ಅಂತ ಟಾಲಿವುಡ್ ವರದಿ ಮಾಡುತ್ತಿದೆ.