ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದಲ್ಲಿನ ಗಿಚ್ಚ ಗಿಲಿ ಗಿಲಿ ಹಾಡು ಸದ್ಯ ಭಾರಿ ಸೌಂಡ್ ಮಾಡುತ್ತಿದೆ. ಪಕ್ಕಾ ಉತ್ತರ ಕರ್ನಾಟಕದ ಜಾನಪದ ಸಾಹಿತ್ಯದ ಈ ಗಿಚ್ಚ ಗಿಲಿ ಗಿಲಿಗೆ ಸ್ಯಾಂಡಲ್ ವುಡ್ ಮಂದಿ ಪಿಧಾ ಆಗಿಬಿಟ್ಟಿದ್ದಾರೆ. ಎಲ್ಲೆಲ್ಲೂ ಈಗ ಗಿಚ್ಚ ಗಿಲಿ ಗಿಲಿಯದ್ದೆ ಸೌಂಡು ಕೇಳಿಸುತ್ತಿದೆ.
ಅಂದಹಾಗೆ ಆಡು ಭಾಷೆಯಲ್ಲಿ ಗಿಚ್ಚ ಗಿಲಿ ಗಿಲಿ ಅಂದ್ರೆ ಖುಷಿ, ಸಂತಸವನ್ನು ಹಂಚಿಕೊಳ್ಳಲು ಇರುವ ಪದ.
ರತ್ನನ್ ಪ್ರಪಂಚ ಸಿನಿಮಾದಲ್ಲಿ ಈ ಗಿಚ್ಚ ಗಿಲಿ ಗಿಲಿ ಸಾಹಿತ್ಯವನ್ನ ಬಳಸಿಕೊಂಡು ಪೆಪ್ಪಿ ಹಾಡೊಂಡನ್ನು ಮಾಡಲಾಗಿದೆ. ಹಾಡಿನಲ್ಲಿ ನಟ ಪ್ರಮೋದ್ ಮತ್ತು ವೈನಿಧಿ ಜಗದೀಶ್ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ್ದಾರೆ.
ಅಜನೀಶ್ ಲೋಕನಾಥ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಗಿಚ್ಚ ಗಿಲಿ ಗಿಲಿ ಸಾಂಗ್ ರಾಜ್ಯದಾದ್ಯಂತ ಗುಯ್ ಗುಡುತ್ತಿದೆ.
ಈ ಹಾಡಿಗೆ ಪವರ್ ಸ್ಟಾರ್ ಧ್ವನಿಯಾಗಿರುವುದು ಗಿಚ್ಚ ಗಿಲಿ ಗಿಲಿ ಈ ಪಾಟಿ ಫೇಮಸ್ ಆಗಲು ಕಾರಣವೂ ಇರಬಹುದು.
ಇದೀಗ ಇದೇ ಗಿಚ್ಚ ಗಿಲಿ ಗಿಲಿ ಸಾಹಿತ್ಯವು ನಟ ನಿರ್ದೇಶಕ ಶ್ರೀನಿ ಮತ್ತು ಅದಿತಿ ಪ್ರಭುದೇವ ಅಭಿಯದ ಓಲ್ಡ್ ಮಾಂಕ್ ಸಿನಿಮಾ ಹಾಡಿನಲ್ಲೂ ಕೇಳಿಬಂದಿದೆ.
ಇದಕ್ಕೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕತ್ ರೆಸ್ಪಾಸ್ ಸಿಗುತ್ತಿದೆ.
ಒಟ್ಟಾರೆ ಗಿಚ್ಚ ಗಿಲಿ ಗಿಲಿ ಎಂಬ ಜಾನಪದ ಸಾಹಿತ್ಯ ಸದ್ಯ ಸ್ಯಾಂಡಲ್ ವುಡ್ ವನ್ನು ಮೋಡಿ ಮಾಡಿದ್ದು, ಕೇಳುಗರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.