ಶಾರುಖ್ ಖಾನ್ ಚಿತ್ರದಲ್ಲಿ ನಯನತಾರಾ ಅಲ್ಲ ಸಮಂತಾ ನಾಯಕಿ..!
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಡ್ರಗ್ ಕೇಸ್ ನಲ್ಲಿ ಜೈಲಿನಲ್ಲಿರುವ ಕಷ್ಟದ ಸಮಯದಲ್ಲೂ ಶಾರುಖ್ ಅವರ ಹೊಸ ಸಿನಿಮಾದ ಅಪ್ ಡೇಟ್ ಸಿಕ್ಕಿದೆ. ತಮಿಳಿನ ಸೂಪರ್ ಹಿಟ್ ನಿರ್ದೇಶಕ ಅಟ್ಲಿ ಜೊತೆಗೆ ಬಾಲಿವುಡ್ ನ ಬಾದ್ ಶಾ ಮುಮದಿನ ಸಿನಿಮಾ ಮಾಡ್ತಿರೋದಾಗಿ ಸುದ್ದಿ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ನಾಯಕಿ ಯಾರೆಂಬ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಆದ್ರೆ ಮುಂಚೂಣಿಯಲ್ಲಿದ್ದ ಹೆಸರು ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರದ್ದು. ಅಂದ್ಹಾಗೆ ಶೂಟಿಂಗ್ ಆರಂಭವಾಗೋದಕ್ಕೂ ಮುನ್ನವೇ ಸಿನಿಮಾಗೆ ನಾಯಕಿಯಾಗಿ ನಯನತಾರಾ ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಹೊರಬಂದಿತ್ತು. ಆದ್ರೆ ಇದೀಗ ಚಿತ್ರದ ನಾಯಕಿ ಬದಲಾಗಿದ್ದಾರೆ ಎನ್ನಲಾಗ್ತಿದೆ. ಹೌದು. ಈ ಸಿನಿಮಾದಲ್ಲಿ ನಯನತಾರಾ ಬದಲಿಗೆ ಟಾಲಿವುಡ್ ನ ಖ್ಯಾತ ನಟಿ ಸಮಂತಾ ನಾಯಕಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಮೂಲಗಳ ಪ್ರಕಾರ ಡೇಟ್ ಹೊಂದಾಣಿಕೆ ಸಮಸ್ಯೆಯಾಗ್ತಿರುವುದರಿಂದ ನಯನತಾರಾ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗ್ತಿದೆ. ಇದೇ ಅಕ್ಟೋಬರ್ ನಲ್ಲಿ ನಯತಾರಾ ಅವರಿಗೆ ಶೂಟಿಂಗ್ ಡೇಟ್ ನೀಡಲಾಗಿತ್ತು. ಆದ್ರೆ ಶಾರುಖ್ ಖಾನ್ ಸದ್ಯ ತಮ್ಮ ಮಗ ಜೈಲು ಸೇರಿರೋದ್ರಿಂದ ಬ್ಯುಸಿಯಾಗಿದ್ದಾರೆ. ಹಾಗಾಗಿ ಶಾರುಖ್ ಹಾಗೂ ನಯನತಾರಾ ಅವರ ಡೇಟ್ ಹೊಂದಾಣಿಕೆ ಆಗದೇ ಇರೋ ಕಾರಣದಿಂದ ನಯನತಾರಾ ಸಿನಿಮಾದಿಂದ ಹೊರಬರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಹೀಗಾಗಿಯೇ ನಿರ್ದೇಶಕರು ಸಿನಿಮಾಗಾಗಿ ಸಮಂತಾ ಅವರ ಬಳಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನೂ ಈ ಸಿನಿಮಾಗೆ ಸದ್ಯ ತಾತ್ಕಾಲಿಕವಾಗಿ ‘ಲಯನ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಶೂಟಿಂಗ್ ಸಹ ಸೆಪ್ಟೆಂಬರ್ ನಲ್ಲಿಯೇ ಆರಂಭವಾಗಿದೆ.