ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ಡ್ರಗ್ಸ್ ಕೇಸ್ ನಲ್ಲಿ ಜೈಲಿನಲ್ಲಿಯೇ ಇದ್ದು, ಸತತವಾಗಿ ಜಾಮೀನು ಅರ್ಜಿ ವಜಾ ಆಗ್ತಲೇ ಇದೆ. ಆರ್ಯನ್ ಪರ ಕಾನೂನು ತಂಡ ಜಾಮೀನಿಗಾಗಿ ಶತಾಯಗಗತಾಯ ಪ್ರಯತ್ನ ಮಾಡ್ತಿದೆ.
ಈ ನಡುವೆ ಆರ್ಯನ್ ಜೈಲಿನಲ್ಲಿ ರಾಮ ಸೀತೆಯ ಮೊರೆ ಹೋಗಿದ್ದಾರಂತೆ. ಹೌದು.. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಧಾರ್ಮಿಕ ಪುಸ್ತಕಗಳನ್ನು ತರಿಸಿ ಓದುತ್ತಿದ್ದಾರಂತೆ. ರಾಮ, ಸೀತೆಯ ಪುಸ್ತಕ ಓದುತ್ತಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಜಾಮೀನು ನಿರಾಕರಣೆಗೊಂಡ ಬಳಿಕದಿಂದ ಆರ್ಯನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಹೀಗಾಗಿ ಆತನಿಗೆ ಕೆಲವೊಂದು ಪುಸ್ತಕಗಳನ್ನು ಓದಲು ಸಲಹೆ ನೀಡಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿರುವ ಗ್ರಂಥಾಲಯದಿಂದ ಕೈದಿಗಳು ಕೇಳಿದ ಪುಸ್ತಕಗಳನ್ನು ನೀಡಲಾಗುತ್ತದೆ. ಇಲ್ಲಿ ಆರ್ಯನ್ ತಮಗೆ ರಾಮ ಹಾಗೂ ಸೀತೆಯ ಪುಸ್ತಕವನ್ನು ನೀಡುವಂತೆ ಕೇಳಿದ್ದರಿಂದ ಅದನ್ನೇ ತರಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.