‘ಡೇಂಜರಸ್’ ಮೂಲಕ ವಿಭಿನ್ನ ಪ್ರಯತ್ನಕ್ಕೆ ವಿವಾದಾತ್ಮಕ ನಿರ್ದೇಶಕ ವರ್ಮಾ ಸಜ್ಜು..!
ರಾಮ್ ಗೋಪಾಲ್ ವರ್ಮಾ ಅಂದ್ರೆ ಅಲ್ಲಿ ವಿವಾದಗಳು ಇರಲೇಬೇಕು.. ಅವರ ಸಿನಿಮಾಗಳು ಅಂದ್ರೆ ಅದ್ರಲ್ಲಿ ಏನಾದ್ರೂ ವಿಭಿನ್ನತೆ ಇರ್ಲೇ ಬೇಕು… ಯಾರ್ ಏನೇ ಹೇಳೀ… ತಲೆ ಕೆಡಿಸಿಕೊಳ್ಳದ ಕ್ಯಾರೆಕ್ಟರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರದ್ದು. ಕಾಂಟ್ರವರ್ಸಿಯಲ್ ಹೇಳಿಕೆ , ಸಿನಿಮಾಗಳ ವಿಚಾರಕ್ಕೆ ಸುದ್ದಿಯಲ್ಲಿರೋರು ರಾಮ್ ಗೋಪಾಲ್ ವರ್ಮಾ.
ಯಾರೂ ಮಾಡದೇ ಇರೋ ಪ್ರಯತ್ನಗಳಿಗೆ ಕೈ ಹಾಕೋದ್ರಲ್ಲೂ ಅವರೇ ಮುಂದು.. ಇವರು ವಯಸ್ಕರ ಸಿನಿಮಾಗಳನ್ನು ನಿರ್ಮಿಸಿ ಅವನ್ನು ಪೇ ಪರ್ ವೀವ್ ಮಾದರಿಯಲ್ಲಿ ಬಿಡುಗಡೆ ಮಾಡಿ ದೊಡ್ಡ ಮಟ್ಟದ ಲಾಭವನ್ನೇ ಗಳಿಸುತ್ತಿದ್ದಾರೆ.
ಇದೀಗ ರಾಮ ಗೋಪಾಲ್ ವರ್ಮಾ ಅವರು ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಪ್ರಯತ್ನ ಒಂದಕ್ಕೆ ಕೈ ಹಾಕಿದ್ದಾರೆ. ಯುವತಿಯರಿಬ್ಬರ ಸಲಿಂಗ ಪ್ರೀತಿಯ ಕಥೆ ಹೊಂದಿರುವ ಸಿನಿಮಾ ಮಾಡುತ್ತಿರುವ ವರ್ಮಾ , ಈ ಸಿನಿಮಾವನ್ನ ಭಿನ್ನ ಮಾದರಿಯ ಮಾರುಕಟ್ಟೆಯಲ್ಲಿದ್ದಾರೆ. ತಮ್ಮ ಹೊಸ ಸಿನಿಮಾ ‘ಡೇಂಜರಸ್’ ಅನ್ನು ಎನ್ ಎಫ್ ಟಿ (ನಾನ್ ಫಂಜಿಬೆಲ್ ಟೋಕನ್) ಬ್ಲಾಕ್ ಚೈನ್ ಮೂಲಕ ಮಾರಾಟಕ್ಕೆ ಇಟ್ಟಿದ್ದಾರೆ.
ರಾಮ್ ಗೋಪಾಲ್ ವರ್ಮಾ ತಮ್ಮ ‘ಡೇಂಜರಸ್’ ಸಿನಿಮಾವನ್ನು 6,00,000 ಯುನಿಟ್ ಮೌಲ್ಯವನ್ನು ನಿಗದಿಪಡಿಸಿದ್ದಾರೆ. ಒಂದು ಯುನಿಟ್ಗೆ 100 ರು ಬೆಲೆ. ಖರೀದಿಸುವವರು ಒಮ್ಮೆಲೆ 5,00,000 ಯುನಿಟ್ ಖರೀದಿ ಮಾಡಬಹುದು. ಅಥವಾ ಬಿಡಿಬಿಡಿಯಾಗಿಯೂ ಖರೀದಿಸಬಹುದು. ಒಂದು ಲಕ್ಷ ಯುನಿಟ್ ಪಾಲನ್ನು ರಾಮ್ ಗೋಪಾಲ್ ವರ್ಮಾ ಹಾಗೂ ಸಿನಿಮಾದ ಇಬ್ಬರು ನಾಯಕಿಯರಾದ ಅಪ್ಸರಾ ರಾಣಿ, ನಯನಾ ಗಂಗೂಲಿ ಹೊಂದಿರುತ್ತಾರೆ.
ಡೇಂಜರಸ್ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಗಳಿಸುವ ಹಣವನ್ನು ಎನ್ಎಫ್ಟಿ ಮಾದರಿಯಲ್ಲಿ ಖರೀದಿಸಿರುವ ಪಾಲುದಾರರಿಗೂ ಹಂಚಲಾಗುತ್ತದೆ. ಸಿನಿಮಾವು ಚಿತ್ರಮಂದಿರದಲ್ಲಿ ಗಳಿಸುವ ಗಳಿಕೆ, ಒಟಿಟಿ ಹಾಗೂ ಪೇ ಪರ್ ವೀವ್ ಮಾದರಿಯಲ್ಲಿ ಗಳಿಸುವ ಹಣವನ್ನು ಸಹ ಪಾಲುದಾರರೊಂದಿಗೆ ಹಂಚಿಕೆ ಮಾಡಿಕೊಳ್ಳಲಾಗುತ್ತದೆ. ಇಷ್ಟು ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿಯನ್ನು ಪಾಲುದಾರರಿಗೆ ನೀಡಲಾಗುತ್ತಿದ್ದು, ಸಿನಿಮಾವನ್ನು ಪಾಲುದಾರರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬಹುದಾಗಿರುತ್ತದೆ.
ಇದರ ಜೊತೆಗೆ ಪಾಲುದಾರರಿಗೆ ರಾಮ್ ಗೋಪಾಲ್ ವರ್ಮಾ ಹಾಗೂ ಚಿತ್ರತಂಡದಿಂದ ವಿಶೇಷ ಪಾರ್ಟಿ ಆಯೋಜಿಸಲಾಗುತ್ತದೆ. ಸಿನಿಮಾ ಖರೀದಿಸುವವರ ಹೆಸರನ್ನು ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಸಹ ಸೇರಿಸಲಾಗುತ್ತದೆ.
ಇನ್ನು ‘ಡೇಂಜರಸ್’ ಸಿನಿಮಾ ಯುವತಿಯರ ಸಲಿಂಗ ಪ್ರೇಮದ ಕತೆಯನ್ನು ಹೊಂದಿದೆ. ಈ ಸಿನಿಮಾವು ಭಾರತದ ಮೊದಲ ಲೆಸ್ಬಿಯನ್ ಕ್ರೈಂ, ಆಕ್ಷನ್, ಥ್ರಿಲ್ಲರ್ ಕತೆಯೆಂದು ಬಣ್ಣಿಸಿದ್ದಾರೆ. ಸಿನಿಮಾವು 90 ನಿಮಿಷ ಅವಧಿಯದ್ದಾಗಿದ್ದು ಸಿನಿಮಾದಲ್ಲಿ ಸಲಿಂಗಿ ಪ್ರೇಮಿಗಳ ಪಾತ್ರದಲ್ಲಿ ಅಪ್ಸರಾ ರಾಣಿ ಮತ್ತು ನಯನಾ ಗಂಗೂಲಿ ನಟಿಸಿದ್ದಾರೆ.