ಸಿನಿಮಾ ಎಂದರೆ ಕೇವಲ ಮನೋರಂಜನೆ ಅಷ್ಟೆ ಅದು ನಮ್ಮ ನಿತ್ಯ ಜೀವನದ ಪ್ರತಿಬಿಂಬ. ಇದು ನೊಡುಗನ ಮೇಲೆ ಒಳ್ಳೆಯ ಮತ್ತು ಕೆಟ್ಟ ಎರಡೂ ಪರಿಣಾಮಗಳನ್ನ ಮೂಡಿಸುತ್ತೆ. ಕೆಲವೊಂದು ಸಿನಿಮಾಗಳು ಮನುಷ್ಯನ ಅಂತರಾಳವನ್ನ ಇನ್ನಿಲ್ಲದಂತೆ ಕಲುಕಿಬಿಡುತ್ತವೆ..ಅಂತಹದೇ ಇನ್ನೊ0ದು ಸಿನಿಮಾ ತಮಿಳಿನ ಕೂಳಂಗಳ್ ಮನುಷ್ಯನ ನೈಜ ಜೀವನದ ಕರಾಳಗಳ ಸತ್ಯಗಳನ್ನ ತೆರೆದಿಡುವ ಚಿತ್ರ ಕೊಳಂಗಳ. ಇದೇ ಸಿನಿಮಾ ಈಗ 2022ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಎಂಟ್ರಿ ಪಡೆದಿದೆ.
ಕೂಳಂಗಳ್ ಎಂದರೇ ನದಿಯ ಪಕ್ಕದಲ್ಲಿ ಇರೊ ಬೆಣಚುಕಲ್ಲು ಎಂದರ್ಥ.. ಚಿತ್ರದ ಕಥೆಗೂ ಇದಕ್ಕೂ ಸಂಬಂಧವಿದ್ದು ಇದನ್ನ ಸಿನಿಮಾದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಪಿ ಎಸ್ ವಿನೋದ್ ಎನ್ನುವವರು ಈ ಸಿನಿಮಾವನ್ನ ನಿರ್ದೇಶಿಸಿದ್ದಾರೆ. ಈ ಚಿತ್ರ ಈಗ 94ನೇ ಆಸ್ಕರ್ಗೆ ಎಂಟ್ರಿ ಆಗುತ್ತಿರುವ ಬಗ್ಗೆ ಭಾರತೀಯ ಚಲನಚಿತ್ರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಪ್ರನ್ ಸೇನ್ ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ಮದ್ಯ ವೆಸನಿ ವ್ಯಕ್ತಿಯೊಬ್ಬ ದಿನವೂ ಕುಡಿದುಕೊಂಡು ಬಂದು ತನ್ನ ಹೆಂಡತಿಯನ್ನ ಹೊಡೆಯುತ್ತಿರುತ್ತಾನೆ. ಇದರಿಂದ ಬೇಸತ್ತ ಪತ್ನಿ ಮನೆ ಬಿಟ್ಟು ಹೊರಟುಹೋಗುತ್ತಾಳೆ. ನಂತರ ಬದಲಾಗುವ ಪಾತ್ರದಾರಿ ತನ್ನ ಚಿಕ್ಕ ವಯಸ್ಸಿನ ಮಗುವನ್ನ ಕರೆದುಕೊಂಡು ಹೆಂಡತಿಯನ್ನ ಹುಡುಕಲು ಹೊರಡುತ್ತಾನೆ. ಹುಡುಕಾಟದಲ್ಲಿ ಎದುರಾಗುವ ಕಷ್ಟಗಳೆ ಕಥೆಯ ಜೀವಾಳ.
ಇಂತಹ ಒಂದು ಅದ್ಭುತ ಚಿತ್ರವನ್ನು ನಟಿ ನಯನ ತಾರ ಮತ್ತು ಪತಿ ವಿಘ್ನೇಶ್ ಶಿವನ್ ತಮ್ಮದೇ ರೌಡಿ ಬ್ಯಾನರ್ಸ್ನಲ್ಲಿ ನಿರ್ಮಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಚೆಲ್ಲಪಾಂಡಿ ಮತ್ತು ಕರುತ್ತದೈಯಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ತಮ್ಮ ನಟನೆ ಮೂಲಕವೇ ಗಮನ ಸೆಳೆದಿದ್ದಾರೆ. ಇನ್ನು ಈ ಖುಷಿ ವಿಚಾರವನ್ನು ನಿರ್ಮಾಪಕ ವಿಘ್ನೇಶ್ ಶಿವನ್ ಕೂಡ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಇದನ್ನು ಕೇಳುವ ಅವಕಾಶ ಬಂದಿದೆ. ನಮ್ಮ ಜೀವನದ ಕನಸು ನನಸಾಗಲು ಇನ್ನೆರೆಡು ಹೆಜ್ಜೆ ಮಾತ್ರ ಬಾಕಿಯಿದೆ ಎಂದು ಹೇಳುವ ಮೂಲಕ ಚಿತ್ರದ ಪೋಸ್ಟರ್ಅನ್ನು ಶೇರ್ ಮಾಡಿಕೊಂಡಿದ್ದಾರೆ.