ಭಾರತದ ಒನ್ ಆಫ್ ದ ಮೋಸ್ಟ್ ಡಿಸೈರೆಬಲ್ ಮೆನ್ ಆಗಿ ಗುರುತಿಸಿಕೊಂಡಿರುವ ನಟ ವಿಜಯ್ ದೇವರಕೊಂಡ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟರ ಪೈಕಿ ಒಬ್ರಾಗಿ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಗೀತಾ ಗೋವಿಂದಂ, ಡಿಯರ್ ಕಾಮ್ರೆಸ್ , ಅರ್ಜುನ್ ರೆಡ್ಡಿಯಂತಹ ಸಿನಿಮಾಗಳಿಂದ ಸಖತ್ ಫೇಮಸ್ ಆಗಿರುವ ವಿಜಯ್ ದೇವರಕೊಂಡಗೆ ಹುಡುಗರಿಗಿಂತ ಹುಡುಗಿರ ಫ್ಯಾನ್ಸ್ ಫಾಲೋವಿಂಗ್ ಹೆಚ್ಚಿದೆ ಎನ್ನಬಹುದು. ಅನೇಕ ಹುಡುಗಿಯರು ತಾವು ಮದುವೆಯಾಗೋ ಹುಡುಗ ವಿಜಯ್ ಅಂತೆಯೇ ಇರಬೇಕು ಎಂದೆಲ್ಲಾ ಕಲ್ಪನೆ ಕಟ್ಟಿಕೊಂಡಿರುತ್ತಾರೆ.
ವಿಜಯ್ ದೇವರಕೊಂಡ ಕ್ಯೂಟ್ ಲುಕ್ಸ್ ಜೊತೆಗೆ ಹಾಟ್ ಅವತಾರದಲ್ಲಿಯೂ ಹುಡುಗಿಯರ ಹಾರ್ಟ್ ಬೀಟ್ಸ್ ಹೆಚ್ಚಿಸುತ್ತಾರೆ. ಹಾಗೆ ನೋಡೋದಾದ್ರೆ ವಿಜಯ್ ತಮ್ಮ ಹಳೆ ಗರ್ಲ್ ಫ್ರೆಂಡ್ ಜೊತೆಗೆ ಬ್ರೇಕ್ ಅಪ್ ವಿಚಾರ ಹಾಗೂ ರಶ್ಮಿಕಾ ಮಂದಣ್ಣ ಜೊತೆಗಿನ ಸಂಬಂಧದ ರೂಮರ್ ಗಳಿಂದ ಆಗಾಗ ಸುದ್ದಿಯಲ್ಲೇ ಇರುತ್ತಾರೆ. ಸಹಜವಾಗಿಯೇ ವಿಜಯ್ ದೇವರಕೊಂಡ ಯಾರನ್ನ ಮದುವೆಯಾಗ್ತಾರೆ..? ಯಾವಾಗ ಮದುವೆಯಾಗ್ತಾರೆ..? ಅನ್ನೋ ಕ್ಯೂರಿಯಾಸಿಟಿ ಇರುತ್ತೆ. ಇನ್ನೂ ಆನ್ ಸ್ಕ್ರೀನ್ ನಲ್ಲಿ ರಶ್ಮಿಕಾ ಜೊತೆಗಿನ ಕ್ಯೂಟ್ ಕೆಮಿಸ್ಟ್ರಿಯಿಂದಾಗಿ ಅನೇಕ ಅಭಿಮಾನಿಗಳು ರಿಯಲ್ ಲೈಫ್ ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆಯಾಗಬೇಕೆಂಬ ಆಸೆಯಿಟ್ಟುಕೊಂಡಿದ್ದಾರೆ. ಆದ್ರೆ ವಿಜಯ್ ದೇವರಕೊಂಡ ಪ್ಲಾನ್ ಬೇರೆನೇ ಇದೆ.
ಹೌದು ವಿಜಯ್ ದೇವರಕೊಂಡ ತಾವು ಮದುವೆಯೇ ಆಗಲ್ಲ ಎಂದು ಸಂದರ್ಶನವೊಂದ್ರಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದ್ರೆ ಆ ನಂತರದಲ್ಲಿ ಮಾತನಾಡಿ ನನ್ನ ತಮ್ಮ ಮೊದಲು ಮದುವೆಯಾಗಬೇಕು. ಆ ನಂತರ ನಾನು ಮದುವೆಯಾಗ್ತೇನೆ ಎಂದಿದ್ದಾರೆ. ಅಂದ್ಹಾಗೆ ವಿಜಯ್ ಕಿರಿಯ ಸಹೋದರ ಆನಂದ್ ದೇವರಕೊಂಡ ಅವರ ಪುಷ್ಪಕ ವಿಮಾನಂ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್ ಈ ರೀತಿ ಹೇಳಿದ್ದಾರೆ.