ಕನ್ನಡಿಗರಾರು ಕಲ್ಪನೆ ಮಾಡಿಕೊಳ್ಳದ ಕರಾಳ ಘಟನೆಯೊಂದು ಕನ್ನಡ ಚಿತ್ರ ರಂಗದಲ್ಲಿ ನಡೆದಿದೆ. ಪುನಿತ್ ರಾಜ್ ಕುಮಾರ್ ಅವರು ವಿಧಿವಶರಾದ ಬಗ್ಗೆ ಅವರ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಮೊದಲು ನಾನು ಹೋಗಬೇಕಿತ್ತು ಮಿಸ್ ಆಗಿ ಅವ್ನು ಹೋಗಿಬಿಟ್ಟ ಅಂತ ಭಾವುಕರಾದರು.
ನನ್ನ ಅವನೆ ಎರಡು ಸಲ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದ್ದ ನಂಗೇ ಅವನೇ ಫೇಸ್ ಮೇಕರ್ ಹಾಕಿಸಿದ್ದ.. ನಾನು ಮೊದಲು ಹೋಗಬೇಕಿತ್ತು ನನಗಿಂತ ಮುಂಚೆ ಅವನೇ ಅಪ್ಪ ಅಮ್ಮನ್ನ ನೋಡಲು ಹೋಗಿಬಿಟ್ಟ….ನಾನು ನನ್ನ ಅಣ್ಣ ನನ್ ತಮ್ಮ ಬಗ್ಗೆ ಯೋಚನೆ ಮಾಡ್ತಿಲ್ಲ… ಮೊದಲ ಪ್ರಶ್ನೆ ಇರೊದು ಜನರು …ಯಾರಿಗೂ ತೊಂದರೆ ಮಾಡಬಾರದು ಇಲ್ಲಿಗೆ ಯಾರಿಗೂ ಹಾನಿಯಾಗಬಾರದು ಅವನನ್ನ ನಗುನಗುತ ಕಳಿಸಿಕೊಡೋಣ… ಕಲಾವಿದನಿಗೆ ಸಾವಿಲ್ಲ ಅವನು ಯಾವತ್ತೂ ನಮ್ಮ ಜೊತೆಯಲ್ಲೇ ಇರುತ್ತಾನೆ. ಸರ್ಕಾರ ಮತ್ತು ನಾವು ಅವನ ಕೊನೆ ಜರ್ನಿಯನ್ನ ಖುಷಿಯಾಗಿ ಕಳಿಸಿಕೊಡೋಣ…