ಅವರು ಇಲ್ಲ ಅಂದ್ರೆ ನಂಬೋಕೆ ಆಗ್ತಿಲ್ಲ
ಬೆಂಗಳೂರು : ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಇಂದು ಅವರು ಇಲ್ಲ ಅಂದ್ರೆ ನಂಬೋಕೆ ಸಾಧ್ಯವಾಗುತ್ತಿಲ್ಲ. ತುಂಬಾ ಬೇಸರ ಆಗುತ್ತದೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಇಂದು ಬೆಂಗಳೂರಿಗೆ ಆಗಮಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ನನಗೆ ಕೋ ಸ್ಟಾರ್ ಅನ್ನೋದಕ್ಕಿಂತ ಒಬ್ಬ ಒಳ್ಳೆಯ ಫ್ರೆಂಡ್ ಆಗಿದ್ದರು.
ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಇಂದು ಅವರು ಇಲ್ಲ ಅಂದ್ರೆ ನಂಬೋಕೆ ಸಾಧ್ಯವಾಗುತ್ತಿಲ್ಲ. ತುಂಬಾ ಬೇಸರ ಆಗುತ್ತದೆ ಎಂದು ಕಂಬನಿ ಮಿಡಿದರು.
ಪುನೀತ್ ಜೊತೆಗಿನ ಸ್ನೇಹದಲ್ಲಿ ಸಾಕಷ್ಟು ನೆನಪುಗಳಿವೆ. ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಮೂರು ವಾರಗಳ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ ಎಂದು ಪುನೀತ್ ನೆನಪುಗಳನ್ನು ಮೆಲುಕು ಹಾಕಿದರು.