ನಾಳೆ ಪುನೀತ್ ಸಾಮಧಿಗೆ ಕುಟುಂಬಸ್ಥರಿಂದ ಹಾಲು ತಪ್ಪು ಕಾರ್ಯ
ಬೆಂಗಳೂರು: ಕೋಟ್ಯಾಂತರ ಕರುನಾಡುಗರನ್ನ ಅಗಲಿರುವ ಅಪ್ಪು ಚಿರನಿದ್ರೆಗೆ ಜಾರಿದ್ದಾರೆ. ಇಂದಿಗೆ ಅಪ್ಪು ಅಗಲಿ 4 ದಿನ ಕಳೆದಿದೆ. ನಾಳೆಗೆ 5ನೇ ದಿನವಾಗಲಿದೆ. ಹೀಗಾಗಿ ನಾಳೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಲಿದ್ದಾರೆ. ನಾಳೆ ಕಾರ್ಯ ಮುಗಿಯುವರೆಗೂ ಸಮಾಧಿ ವೀಕ್ಷಣೆಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೆಕ್ಷನ್ 144 ಜಾರಿ ಆಗಿದೆ.
ಅಲ್ಲದೇ ಪೊಲೀಸ್ ಸರ್ಪಗಾವಲನ್ನ ನಿಯೋಜಿಸಲಾಗಿದೆ. ನಾಳೆ ಸಮಾಧಿ ವೀಕ್ಷಣೆಗಾಗಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣ ಸದ್ಯ ಕಂಠೀರವ ಸ್ಟೂಡಿಯೋ ಬಳಿ ಪೊಲೀಸರು ಬಿಗಿ ಭದ್ರತೆಗೊಳಿಸಿದ್ದಾರೆ. ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋ ಪ್ರವೇಶವನ್ನು ನಿಷೇಧಿಸಲಾಗಿದೆ. ಈಗಾಗಲೇ ಪುನೀತ್ ಅವರ ಅನೇಕ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಬಂದು ವಾಪಾಸ್ ಆಗುತ್ತಿದ್ದಾರೆ.
ನಾಳೆ ಅಪ್ಪು ಸಮಾಧಿಗೆ ಕುಟುಂಬಸ್ಥರು ಹಾಲುತುಪ್ಪ ಕಾರ್ಯನೆರವೇರಿಸಲಿದ್ದು, ಕೇವಲ ಆಪ್ತರು , ಗಣ್ಯರು ಹಾಗೂ ಕುಟುಂಬ ಸದಸ್ಯರಿಗೆ ಮಾತ್ರ ಕಂಠೀರವ ಸ್ಟುಡಿಯೋ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಕಂಠೀರವ ಸ್ಟುಡಿಯೋ ಬಳಿ ಸಂಪೂರ್ಣ ಬ್ಯಾರಿಗೇಡ್ ಹಾಕಿ ಆರ್ಎಎಫ್ ಕಮಾಂಡೋ ಪಡೆ, ಎರಡು ಕೆಎಸ್ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ.