ಬೆಂಗಳೂರು: ಕೋಟ್ಯಾಂತರ ಕರುನಾಡಿಗರನ್ನ ಅಗಲಿ ಇಹಲೋಕ ತ್ಯಜಿಸಿರುವ ಅಪ್ಪು ಅವರು ಸದಾ ಅಭಿಮಾನಿಗಳ ಹೃದಯದಲ್ಲಿ , ಅವರ ಸಿನಿಮಾಗಳ ಮೂಲಕ , ನಗುಮೊಗದ ಮೂಲಕ ನಮ್ಮ ಜೊತೆಗೆ ಇರುತ್ತಾರೆ. ಅಪ್ಪು ಅವರ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳು ಕಂಠೀರವ ಸ್ಟೇಡಿಯಮ್ ನಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಸಾಲುಗಟ್ಟಿ ನಿಂತಿದ್ರು. ಅಪ್ಪು ಅಂತಿಮ ದರ್ಶನಕ್ಕಾಗಿ ಸೇರಿದ್ದ ಜನಸಾಗರ ಅಂತಿಮ ನಮನ ಸಲ್ಲಿಸುವುದಕ್ಕೂ ಮುನ್ನ ಚಪ್ಪಲಿಗಳನ್ನ ಬಿಟ್ಟಿದ್ದರು. ಇದೀಗ ಬಿಬಿಎಂಯು ರಾಶಿ ರಾಶಿ ಚಪ್ಪಲಿಗಳನ್ನ ತೆರವುಗೊಳಿಸಿದೆ.
ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಲಕ್ಷಾಂತರ ಜೋಡಿ ಚಪ್ಪಲಿ ಕ್ರೀಡಾಂಗಣದಲ್ಲಿ ಬಿದ್ದಿತ್ತು. ಇದೀಗ ಅಪ್ಪಲಿಗಳ ರಾಶಿಯನ್ನು BBMP ಸ್ವಚ್ಛತಾ ಸಿಬ್ಬಂದಿ ತೆರವು ಮಾಡಿದ್ದಾರೆ.ಅಭಿಮಾನಿಗಳು ಚಪ್ಪಲಿ ತೆಗೆದು ಪುನೀತ್ ಅವರ ಪಾರ್ಥಿವ ಶರೀರಕ್ಕೆ ನಮಸ್ಕರಿಸಿದ್ದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಮಾತನಾಡಿಕೊಳ್ತಾ ಮೆಚ್ಚುಗೆ ವ್ಯಕ್ತಪಡಿಸ್ತಾಯಿದ್ದಾರೆ.