ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಯ ದರ್ಶನಕ್ಕೆ ಕಂಠೀರವ ಸ್ಟೂಡಿಯೋದಲ್ಲಿ ಸರ್ಕಾರದ ವತಿಯಿಂದ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ.
ಪುನೀತ್ ನಮ್ಮನ್ನಗಲಿ ಇಂದಿಗೆ ಆರು ದಿನ. ನಿನ್ನೆ ಪುನೀತ್ ಅವರ ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಬಿಡುವ ಕಾರ್ಯವನ್ನ ನಡೆಸಲಾಯಿತು. ಹಾಗಾಗಿ ಇಂದಿನಿಂದ ಅಪ್ಪು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 6 ವರೆಗೆ ಮುಕ್ತ ಅವಕಾಶವನ್ನ ಕಲ್ಪಿಸಲಾಗಿದೆ ಎಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.
ಸಮಾಧಿ ದರ್ಶನ ಬಯಸಿ ಬರುವವರ ಸಂಖ್ಯೆ ಕಡಿಮೆ ಆಗುವವರೆಗೂ ಪೊಲೀಸ್ ಭದ್ರತೆ ಇರಲಿದೆ. ದೀಪಾವಳಿ ಹಬ್ಬದ ದಿನವೂ ಸಾವಿರಾರು ಅಭಿಮಾನಿಗಳು ಬೆಳ್ಳಂಬೆಳಗ್ಗೆಯೇ ಪುನೀತ್ ಅವರ ಸಮಾಧಿ ಬಳಿ ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಸಮಾಧಿ ಸ್ಥಳದಲ್ಲಿ ನಿಂತು ಸಂತಾಪ ಸೂಚಿಸುತ್ತಿದ್ದಾರೆ.