ಬೆಂಗಳೂರು: ಅಪ್ಪು ಅಗಲಿಕೆಯಿಂದ ಅಭಿಮಾನಿಗಳು ತೀವ್ರ ಆಘತಾಕ್ಕೆ ಒಳಗಾಗಿದ್ದಾರೆ. ಈ ನಡುವೆ ಅನೇಕ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ರೆ ಕೆಲವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳದಂತೆ ತಿಳಿಸಿದ್ರು. ಆದ್ರೂ ಕೂಡ ಸರಣಿ ಆತ್ಮಹತ್ಯೆ ಮುಂದುವರೆದಿದೆ. ನಿನ್ನೆ ಇಬ್ಬರು ಇಂದು ಒಬ್ಬ ಅಪ್ಪು ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಈ ಬಗ್ಗೆ ರಾಘಣ್ಣ ಬೇಸರದಿಂದ ಮಾತನಾಡಿದ್ದು, ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡುತ್ತೇನೆ. ನಾವು ನೋವಿನಲ್ಲಿದ್ದೇವೆ, ಪುನೀತ್ಗೆ ಕೆಟ್ಟ ಹೆಸರು ತರಬೇಡಿ ಮನವಿ ಮಾಡಿದ್ದಾರೆ.
ಅಭಿಮಾನಿ ದೇವರುಗಳಾದ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ಳುತ್ತೇನೆ. ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ, ಪುನೀತ್ ಗೆ ಕೆಟ್ಟ ಹೆಸರು ತರಬೇಡಿ ಮತ್ತು ನಿಮ್ಮ ತಂದೆ-ತಾಯಿಗೆ ನೋವು ಕೊಡಬೇಡಿ. ಒಬ್ಬರ ಹಿಂದೆ ಒಬ್ಬರು ಹೋದರೆ ಭೂಮಿ ಮೇಲೆ ಯಾರು ಇರಲ್ಲ. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೋಡ್ತೀರಾ. ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ ದುಡುಕಿನ ನಿರ್ಧಾರ ಮಾಡಬೇಡಿ ಎಂದು ಹೇಳಿದ್ದಾರೆ.