ಮಿಸ್ ಇಂಡಿಯಾ 2021 ಟೈಟಲ್ ತಮ್ಮದಾಗಿಸಿಕೊಂಡ ಪೂಜಾ ರಮೇಶ್
ಸ್ಯಾಂಡಲ್ವುಡ್ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಚಿರಪರಿಚಿತರಾಗಿರುವ ನಟಿ ಪೂಜಾ ರಮೇಶ್ ಅವರು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ನೋಡಿದ್ದಾರೆ. ಇದೀಗ ತಮ್ಮ ಶ್ರಮಕ್ಕೆ ಪ್ರತಿಫಲ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಮಿಸ್ಟರ್ ಅಂಡ್ ಮಿಸಸ್ ಇಂಡಿಯಾ 2021 ಶೋನಲ್ಲಿ ಸ್ಪರ್ಧಿಸಿದ್ದ ಪೂಜಾ ರಮೇಶ್ ಅವರು ಮಿಸ್ ಇಂಡಿಯಾ 2021 ಟೈಟಲ್ ಗೆದ್ದಿದ್ದಾರೆ.
ಅಷ್ಟೇ ಅಲ್ಲ ಬ್ಯೂಟಿಫುಲ್ ಹೇರ್ ಅಂಡ್ ಬೆಸ್ಟ್ ಹೇರ್ ಸ್ಟೈಲ್ ಗೆ ಕೂಡ ಅವಾರ್ಡ ಪಡೆದುಕೊಂಡಿದ್ದಾರೆ. ಪೂಜಾ ರಮೇಶ್ ಸ್ಯಾಂಡಲ್ವುಡ್ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಚಿರಪರಿಚಿತವಾಗಿದ್ದಾರೆ. ಪೂಜ ರಮೇಶ್ ಅವರು ಫ್ಯಾಷನ್ ಶೋಗಳಲ್ಲೂ ಕೂಡ ತಮ್ಮದೆ ಆದ ಚಾಪು ಮೂಡಿಸಿದ್ದಾರೆ.
ಇವರು ಹಲವಾರು ಶೋಗಳಲ್ಲಿ ಕಾಣಿಸಿಕೊಂಡು ಮಾಡೆಲ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ . 2015ರಿಂದ ಚಿತ್ರರಂಗದಿಂದ ದೂರವಿದ್ದ ಪೂಜಾ ರಮೇಶ್ ಈಗ ಪಿಟ್ ಅಂಡ್ ಫೈನ್ ಆಗಿ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಾಯಿದ್ದಾರತೆ. ಇವರು ಫ್ಯಾಶನ್ ಶೋಗಳಲ್ಲಿ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದಾರೆ . 2009ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪೂಜಾ ರಮೇಶ್ ,ಪೇಪರ್ ದೋಣಿ ,ಲಹರಿ ,ತಾಂಡವ ಮಹಾಕಾಳಿ ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ನಟನೆ ಅಷ್ಟೇ ಅಲ್ದೇ ಸಾಮಾಜಿಕ ಕಳಕಳಿಯಿಂದಲೂ ಗುರುತಿಸಿಕೊಂಡಿರುವ ನಟಿ ಪೂಜಾ ರಮೇಶ್ ಅವರು, ಕೊರೊನಾ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರ ಮನೆ ಬಾಗಿಲಿಗೆ ಹೋಗಿ ಯೋಗಕ್ಷೇಮ ವಿಚಾರಿಸಿ ಅಹಾರ ಕಿಟ್ ನೀಡಿ ಆರ್ಶಿವಾದ ಪಡೆದುಕೊಂಡಿದ್ದರು.
ಇನ್ನೂ ಇತ್ತೀಚೆಗೆ ರಾಜ್ಯದ ಸಾಧಕರ ಸಾಧನೆಯ ಪಟ್ಟಿಯಲ್ಲಿ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು. ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಿರುವ ಪೂಜಾ ರಮೇಶ್ ಗೆ ಹಲವು ಸಿನಿಮಾಗಳ ಆಫರ್ ಗಳು ಬರುತ್ತಿವೆಯಂತೆ.
ಮತ್ತೆ ಲವಲವಿಕೆಯಿಂದ ಉತ್ತಮ ಆರಂಭಿಕ ಪಡೆದು ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಾಯಿರುವ ಪೂಜಾ ಅವರು ಹೀಗೆ ಹಲವು ಶೋ ಹಾಗೂ ಸಿನಿಮಾಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ. ಪೂಜಾ ಅವರು ಯಶಸ್ಸಿನ ಉತ್ತುಂಗಕ್ಕೇರಲಿ. ಸಾಧನೆಗಳ ಜೊತೆಗೆ ಸಿನಿಮಾರಂಗದಲ್ಲಿ ಮತ್ತೆ ಮಿಂಚಲಿ.. ಆಲ್ ದಿ ಬೆಸ್ಟ್ ಪೂಜಾ ರಮೇಶ್.