ದೀಪಾವಳಿ ಹಬ್ಬವನ್ನ ದೇಶಾದ್ಯಂತೆ ಎಲ್ಲರೂ ಕೂಡ ಅತ್ಯಂತ ಸಡಗರ ಸಂಭ್ರಮದಿಂದಲೇ ಆಚರಣೆ ಮಾಡ್ತಾಯಿದ್ದಾರೆ. ಬಾಲಿವುಡ್ ತಾರೆಯರಂತೂ ಧೂಮ್ ಧಾಮ್ ಆಗಿ ದೀಪಾವಳಿ ಸೆಲೆಬ್ರೇಟ್ ಮಾಡಿದ್ದಾರೆ. ಅದೇ ರೀತಿ ಬಾಲಿವುಡ್ ನಟ , ನಿರ್ದೇಶಕ ಫರ್ಹಾನ್ ಅಖ್ತರ್ ಅವರು ದೀಪಾವಳಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಈ ಮೂಲಕ ಸರ್ವಧರ್ಮ ಪ್ರೇಮವನ್ನ ಮೆರೆದಿದ್ದಾರೆ. ಆದ್ರೆ ಇದು ಕೆಲಲ ನೆಟ್ಟಿಗರ ಕಣ್ಣು ಕೆಂಪಗಾಗಿಸಿದ್ದು, ಫರ್ಹಾನ್ ವಿರುದ್ಧ ಟಿಕಾಪ್ರಹಾರ ಶುರು ಮಾಡಿದ್ದಾರೆ.
ಫರ್ಹಾನ್ ಎರಡು ದಿನದ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ಫರ್ಹಾನ್ ಅಖ್ತರ್ ಹಣೆಗೆ ಬೊಟ್ಟು ಇಟ್ಟುಕೊಂಡು ಪೂಜೆಯೊಂದರಲ್ಲಿ ಭಾಗಿಯಾಗಿದ್ದರು. ತಮ್ಮ ಪಕ್ಕದಲ್ಲಿ ಕುಳಿತಿರುವ ಮಹಿಳೆಯ ಹಣೆಗೆ ಕುಂಕುಮ ಇಡುತ್ತಿದ್ದರು. ಈಕೆ ಫರ್ಹಾನ್ರ ಗರ್ಲ್ಫ್ರೆಂಡ್ ವಿಜೆ ಶಿಬಾನಿ ಎನ್ನಲಾಗುತ್ತಿದೆ. ಫರ್ಹಾನ್ ಅಖ್ತರ್ ಹಂಚಿಕೊಂಡಿರುವ ಈ ಚಿತ್ರಕ್ಕೆ ಹಲವರು ಒಳ್ಳೆಯ ಕಮೆಂಟ್ ಗಳನ್ನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಹಲವು ಇಸ್ಲಾಮ್ ಧರ್ಮದವರು ಕಟುವಾಗಿ ಟೀಕೆ ಮಾಡಿದ್ರೆ, ಇನ್ನೂ ಕೆಲ ಹಿಂದೂಗಳು ಡ್ರಾಮಾ ಎಂದು ಟೀಕೆ ಮಾಡಿದ್ದಾರೆ. ನೀನು ನಿಜಕ್ಕೂ ಮುಸ್ಲಿಂ ಏನಾ? ಎಂದು ಫರ್ಹಾನ್ ಅಖ್ತರ್ ಅನ್ನು ಪ್ರಶ್ನೆ ಮಾಡಿದ್ದಾರೆ. ಒಬ್ಬ ಮುಸಲ್ಮಾನನಾಗಿ ಹೀಗೆ ಮಾಡಲು ನಾಚಿಕೆಯಾಗುವುದಿಲ್ಲವೇ?’ ಎಂದೆಲ್ಲಾ ಟೀಕೆ ಮಾಡಿದ್ದಾರೆ.
ಇನ್ನು ಕೆಲವರು , ನಿನ್ನ ತಂದೆ ನೋಡಿದರೆ ಯಾವ ಧರ್ಮದಲ್ಲೂ ನಂಬಿಕೆ ಇರಿಸೊಲ್ಲ, ನೀನು ನೋಡಿದರೆ ಹೀಗೆ ಡ್ರಾಮಾ ಮಾಡುತ್ತಿದ್ದೀಯ ಎಂದು ಫರ್ಹಾನ್ ಅಖ್ತರ್ರ ತಂದೆ ಜಾವೇದ್ ಅಖ್ತರ್ ಅನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ಹಿಂದು ಧರ್ಮಕ್ಕೆ ಅಪಚಾರ ಮಾಡಲೆಂದೇ ಫರ್ಹಾನ್ ಹಬ್ಬ ಆಚರಣೆ ಮಾಡುತ್ತಿದ್ದಾನೆ ಎಂದೆಲ್ಲಾ ಕಮೆಂಟ್ ಗಳನ್ನ ಮಾಡಿದ್ದಾರೆ. ಫರ್ಹಾನ್ ಅಖ್ತರ್ ತಂದೆ ಜಾವೇದ್ ರಂತೆ ಯಾವುದೇ ಧರ್ಮವನ್ನೂ ಪಾಲಿಸುವುದಿಲ್ಲ. ಆದರೆ ಎಲ್ಲ ಧರ್ಮದ ಹಬ್ಬಗಳನ್ನು ಆಚರಣೆ ಮಾಡುತ್ತಾರೆ.