ಪುನೀತ್ ರಾಜ್ ಕುಮಾರ್ ಅವರ ನಿಧನವನ್ನ ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಕಷ್ಟವಾಗುತ್ತಿದೆ., ಪುನೀತ್ ಸಾವು ಸಂಭವಿಸಿ ಒಂಬತ್ತು ದಿನ ಕಳೆದರೂ ಅವರ ಸಮಾಧಿಯನ್ನ ದರ್ಶನ ಮಾಡಲು ಬರುತ್ತಿರುವ ಅಭಿಮನಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ.
ಈಗ ಪರಸ್ಪರ ಪ್ರೀತಿ ಮಾಡುತ್ತಿರುವ ಯುವಕ ಯುವತಿ ಜೋಡಿಯೊಂದು ಬಂದು ಅಪ್ಪು ಸಮಾಧಿ ಎದುರು ಮದುವೆ ನಿರ್ಧರಿಸಿವೆ. ಬಳ್ಳಾರಿಯಿಂದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಜೋಡಿಗಳು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತದ್ದಾರೆ. ಈ ಜೋಡಿ ಅಪ್ಪು ಸಮಾಧಿ ಸ್ಥಳದಲ್ಲೇ ಮದುವೆಯಾಗುವುದಾಗಿ ಪೊಲೀಸರೆದುರು ಪಟ್ಟು ಹಿಡಿದರು. ರಾಘಣ್ಣ, ಶಿವಣ್ಣ ಸಹ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಈ ಜೋಡಿ ಹೇಳಿದರು.
ನಮ್ಮ ಕುಟುಂಬಸ್ಥರಿಂದ ಯಾವುದೇ ಅಡ್ಡಿಯಿಲ್ಲ, ಇಬ್ಬರೂ ಕುಟುಂಬದವರ ಒಪ್ಪಿಗೆ ಪಡೆದಿದ್ದೇವೆ’ ಎಂದರು. ಆದರೆ ಸ್ಥಳದಲ್ಲಿರುವ ಪೊಲೀಸರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದರು. ಕಾಡಿ, ಬೇಡಿದರೂ ಪೊಲೀಸರು ಒಪ್ಪಲಿಲ್ಲ. ಬೇಸತ್ತು ಕೊನೆಗೆ ಈ ಪ್ರೇಮಿಗಳು ತಮ್ಮ ಊರಿನ ದಾರಿ ಹಿಡಿದರು