ಟಾಲಿವುಡ್ ನ ಸ್ವೀಟಿ ಅನುಷ್ಕಾ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಸ್ವೀಟಗೆ ಸೋಷಿಯಲ್ ಮೀಡಿಯಾದಲ್ಲಿ ತಾರೆಯರು , ಅಭಿಮಾನಿಗಳು ಬರ್ತ್ ಡೇ ವಿಶಸ್ ತಿಳಿಸುತ್ತಿದ್ದಾರೆ.
ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ಖ್ಯಾತಿ ಹೊಂದಿರುವ ಯುವಿ ಕ್ರಿಯೇಷನ್ಸ್ ಅನುಷ್ಕಾ ಶೆಟ್ಟಿ ಅವರ ಜನ್ಮದಿದ ಪ್ರಯುಕ್ತ ಹ್ಯಾಟ್ರಿಕ್ ಪ್ರಾಜೆಕ್ಟ್ ಘೋಷಿಸಿದೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಯುವಿ ಕ್ರಿಯೇಷನ್ಸ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ, ರಾಧೆಶ್ಯಾಮ್ ಚಿತ್ರಗಳನ್ನ ನಿರ್ಮಿಸಿದೆ. ಇದೀಗ ಅನುಷ್ಕಾ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆಗೊಳಿಸಿರುವ ಯುವಿ ಕ್ರಿಯೇಶನ್ಸ್, ಬ್ಯೂಟಿ ಕ್ವೀನ್ ಅನುಷ್ಕಾ 2013 ರಲ್ಲಿ ಮಿರ್ಚಿ & 2018 ರಲ್ಲಿ ಭಾಗಮತಿ ಮೂಲಕ ಪ್ರೇಕ್ಷಕರ ಮನಸ್ಸನ್ನ ಗೆದಿದ್ದರು. ಇದೀಗ ಹ್ಯಾಟ್ರಿಕ್ ಕಾಂಬಿನೇಶನ್ಗಾಗಿ ಮತ್ತೊಮ್ಮೆ ಒಟ್ಟಿಗೆ ಸೇರುತ್ತಿರುವುದಾಗಿ ಘೋಷಿಸಿದೆ.
ಹೌದು ಮಹೇಶ್ ಬಾಬು.ಪಿ ನಿರ್ದೇಶನದಲ್ಲಿ #ಅನುಷ್ಕಾ48 ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವುದಾಗಿ ತಿಳಿಸಿದ್ದಾರೆ. ಈ ಹೊಸ ಚಿತ್ರದಲ್ಲಿ ಅನುಷ್ಕಾ ಹೊಸ ಟ್ರೆಂಡಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ನಟನೆ ಹಾಗೂ ಯುವಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗಿದ್ದ ಭಾಗಮತಿ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ಟ ಆಗಿತ್ತು. ಇದೀಗ ಇದೇ ಕಾಂಬಿನೇಶನ್ ನಲ್ಲಿ ಹೊಸ ಚಿತ್ರವೂ ತಯಾರಾಗುತ್ತಿದ್ದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ನಲ್ಲಿರುವ ಸಿನಿಮಾತಂಡ ಹ್ಯಾಟ್ರಿಕ್ ಸಕ್ಸಸ್ ನ ನಿರೀಕ್ಷೆಯಲ್ಲಿದೆ.