ಬಳ್ಳಾರಿ : ಇಂದಿಗೆ ಅಪ್ಪು ನಮ್ಮನ್ನೆಲ್ಲ ಅಗಲಿ 11 ದಿನಗಳು ಕಳೆದಿವೆ.. ಆದ್ರೂ ಅಪ್ಪು ಅಕಾಲಿಕ ನಿಧನದ ನೋವಿನಿಂದ ಅವರ ಕುಟುಂಬ ಹಾಗೂ ಕರುನಾಡು ಹೊರ ಬಂದಿಲ್ಲ. ಇಂದಿಗೂ ದೇವರ ಅನ್ಯಾಯ ನೆನಯುತ್ತಾ ವಿಧಿಗೆ ಶಾಪ ಹಾಕ್ತಾಯಿದ್ದಾರೆ ಅಭಿಮಾನಿಗಳು..
ಈ ನಡುವೆ ತಾರೆಯರು , ರಾಜಕೀಯ ನಾಯಕರು ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಂತಿಯೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಪುನೀತ್ ರಾಜ್ ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ ನಮಗಿಂತ ಸಣ್ಣವನಿಗೆ ಶ್ರದ್ಧಾಂಜಲಿ ಮಾಡೋ ದಿನ ಬರುತ್ತದೆ ಅಂದುಕೊಂಡಿರಲಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.
ನಮಗಿಂತ ಸಣ್ಣವನಿಗೆ ಶ್ರದ್ಧಾಂಜಲಿ ಸಭೆ ಮಾಡೋ ದಿನ ಬರುತ್ತದೆ ಅಂದುಕೊಂಡಿರಲಿಲ್ಲ. ಪುನೀತ್ ಸೇವೆ ಮಾತಲ್ಲಿ ವರ್ಣನೆ ಮಾಡಲಾಗುತ್ತಿಲ್ಲ. ಅಪ್ಪು ಸಮಾಜ ಸೇವೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಪಾಕಿಸ್ತಾನದ ಅಭಿಮಾನಿಯೊಬ್ಬ ಪುನೀತ್ ಪಾಲೋ ಮಾಡುತ್ತಿದ್ದರು ಅನ್ನೋದು ಕೂಡ ವಿಶೇಷವಾಗಿದೆ. ಕೌಟುಂಬಿಕ ಚಿತ್ರದಿಂದಲೇ ಪುನೀತ್ ಫೇಮಸ್ ಆಗಿದ್ದರು. ಸಂದೇಶ ಇರುವ ಸಿನಿಮಾಗಳಲ್ಲಿ ನಟಸುತ್ತಿದ್ದರು. ನನ್ನ ಮಗನನ್ನು ಶೂಟಿಂಗ್‍ಗೆ ಕರೆದುಕೊಂಡು ಹೋಗುತ್ತಿದ್ದರು. ಹೀರೋ ಮಾಡೋ ವಿಚಾರ ನನಗೆ ಬಿಡಿ ಎಂದಿದ್ದರು.
ರಾಜಕುಮಾರ ಪಾರ್ಕ್ ಉದ್ಘಾಟನೆ ವೇಳೆ ಇಡೀ ಕುಟುಂಬವೇ ಬಳ್ಳಾರಿಗೆ ಬಂದಿತ್ತು. ಹದಿನಾರು ವೃದ್ಧಾಶ್ರಮ, ವಿದ್ಯಾಭ್ಯಾಸ, ದಾನದರ್ಮ, ಮಾಡಿದ್ದರು ಯಾರಿಗೂ ಹೇಳುತ್ತಿರಲಿಲ್ಲ. ಇವತ್ತು ಪುನೀತ್‍ನಿಂದಾಗಿ ಸೇವೆ ಮಾಡಲು ಹೊರಗೆ ಬಂದಿದ್ದೇನೆ. ಪುನೀತ್ ಇಲ್ಲವೆನ್ನೋದು ನಂಬಲು ಆಗುತ್ತಿಲ್ಲ. ರಾಜಕೀಯದಲ್ಲಿ ಉನ್ನತ ಸ್ಥಾನ ನನಗೆ ಬೇಕಿಲ್ಲ. ಆದರೆ ಬಳ್ಳಾರಿ ಜನರಿಗೆ ಸೇವೆ ಮಾಡಬೇಕಿದೆ. ಕೊನೆಯ ಉಸಿರಿರೋವರೆಗೂ ಬಳ್ಳಾರಿಯಲ್ಲಿ ಇರಬೇಕಿದೆ. ಬಳ್ಳಾರಿ ಜನರ ಸೇವೆ ಮಾಡುತ್ತೆನೆ. ರಾಜಕುಮಾರ ಸಿನಿಮಾದ ಸ್ಪೂರ್ತಿಯಿಂದ ಜನ ನಮ್ಮ ವೃದ್ದಾಶ್ರಮದಲ್ಲಿ ಇದ್ದ ತಂದೆ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.