ಪುನೀತ್ ರಾಜ್ ಕುಮಾರ್ ರವರು ಸಾವಿನ ನಂತರ ಕಣ್ಣುಗಳನ್ನ ದಾನ ಮಾಡಿ ನಾಲ್ವರು ಅಂದರ ಬಾಳಿಗೆ ಬೆಳಕಾದ ಸುದ್ದಿ ನಿಮಗೆಲ್ಲ ಗೊತ್ತೆ ಇದೆ… ಯಥಾ ಹೀರೋ ತಥಾ ಫ್ಯಾನ್ಸ್ ಎನ್ನುವಂತೆ… ಅಪ್ಪು ಅವರ ಆದರ್ಶದ ಹಾದಿಯನ್ನ ಸಾವಿರಾರು ಜನ ಹಿಂಬಾಲಿಸುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ಗ್ರಾಮದ ಬರೋಬ್ಬರಿ 60ಕ್ಕೂ ಜನರು ಕಣ್ಣು ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಜೊತೆಗೆ ನೇತ್ರ ದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಇಂಥ ನಿರ್ಧಾರ ತೆಗೆದುಕೊಂಡಿರುವುದು ಅಪ್ಪುಗೆ ಗೌರವ ನಮನ ಸಲ್ಲಿಸಲು.
ಬಂಜಾರ ಸಮುದಾಯದ 60ಕ್ಕೂ ಅಧಿಕ ಯುವಕರು, ಯುವತಿಯರು ಹಾಗೂ ಗ್ರಾಮದ ಜನರು ನೇತ್ರದಾನ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಪುನೀತ್ ಅಗಲಿಕೆಯ ಬಳಿಕ ಇಡೀ ಗ್ರಾಮವೇ ಶೋಕದ ಮಡುವಿನಲ್ಲಿ ಮುಳುಗಿತ್ತು.
ಪವರ್ ಸ್ಟಾರ್ ಸಾವಿನ ನಂತರ ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಕರ್ನಾಟಕದಾದ್ಯಂತ ಅಭಿಮಾನಿಗಳು ಸ್ವಂ ಪ್ರೇರಿತರಾಗಿ ಆಸ್ಪತ್ರೆಗೆ ಬಂದು ನೇತ್ರದಾನ ಪತ್ರಕ್ಕೆ ಸಹಿ ಹಾಕುತ್ತಿದ್ದಾರೆ. ಹುಬ್ಬಳ್ಳಿಯ ಎಂಎಂ ಜೋಶಿ ನೇತ್ರ ಚಿಕಿತ್ಸಾಲಯದಲ್ಲಿ ಒಂದೇ ವಾರದಲ್ಲಿ 500 ಜನರಿಂದ ನೇತ್ರದಾನಕ್ಕೆ ನೊಂದಣಿಯಾಗಿದೆ.