ಈ ವಷಾರ್ಂತ್ಯಕ್ಕೆ ಕ್ರಿಕೆಟ್ ಸಂಬಂಧಿಸಿದ 2 ಸಿನಿಮಾಗಳು ತೆರೆಗೆ
ಬಾಲಿವುಡ್ ಮತ್ತು ಕ್ರಿಕೆಟಿಗೆ ಒಂದಲ್ಲ ಒಂದು ರೀತಿಯ ನಂಟಿದೆ.
ಅದು ನಟಿಯರ ಜೊತೆ ಕ್ರಿಕೆಟಿಗರ ಪ್ರೀತಿ, ಪ್ರೇಮ, ಪ್ರಣಯ ವಿಚಾರವಾಗಿರಬಹುದು.
ಕ್ರಿಕೆಟಿಗರ ಸಿನಿಮಾವಾಗಿರಬಹುದು.. ಹೀಗೆ ಒಂದಲ್ಲ ಒಂದು ರೀತಿಯ ಸಂಬಂಧಗಳಿವೆ.
ಹೌದು, ಬೆಳ್ಳಿ ಪರದೆಯ ಮೇಲೆ ಕೆಲವು ಕ್ರಿಕೆಟಿಗರ ಸಿನಿಮಾಗಳು ರಾರಾಜಿಸಿದ್ರೆ, ಮತ್ತೆ ಕೆಲವು ಸಿನಿಮಾಗಳು ಕಾಲ್ಪನಿಕ ಅಥವಾ ನೈಜ ಘಟನೆಯನ್ನು ಆಧಾರಿತ ಚಿತ್ರಗಳು ತೆರೆ ಕಂಡಿವೆ.
ಕಳೆದ ಎರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ಚಿತ್ರರಂಗ ಈಗ ನಿಧಾನವಾಗಿ ಸದ್ದು ಮಾಡುತ್ತಿವೆ.
ಅದ್ರಲ್ಲೂ ಕ್ರಿಕೆಟ್ ಗೆ ಸಂಬಂಧ ಪಟ್ಟಂತಹ ಎರಡು ಸಿನಿಮಾಗಳು ಈ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಲಿವೆ.
ಅದರಲ್ಲೂ ಬಹುನಿರೀಕ್ಷಿತ 83 ಚಿತ್ರ ಡಿಸೆಂಬರ್ 24ರಂದು ತೆರೆಗೆ ಬರಲಿದೆ.
1983ರ ವಿಶ್ವಕಪ್ ಗೆದ್ದ ಭಾರತ ತಂಡದ ಸಾಧನೆಯನ್ನು ಪ್ರತಿಬಿಂಬಿಸುವ ಈ ಚಿತ್ರ ಇದಾಗಿದೆ.
ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರನ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ 1983ರ ವಿಶ್ವಕಪ್ ಗೆದ್ದ ಭಾರತ ತಂಡ ಮತ್ತು ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಕೆಲವು ಆಟಗಾರರ ಮಕ್ಕಳು ಕೂಡ ನಟಿಸಿದ್ದಾರೆ.
ಇನ್ನು ಜೆರ್ಸಿ ಚಿತ್ರ. ಇದು ಮೂಲ ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಂಡಿರುವ ಈ ಚಿತ್ರ ಈಗ ಹಿಂದಿಯಲ್ಲಿ ಮತ್ತೆ ತೆರೆ ಕಾಣುತ್ತಿದೆ.
ಶಾಹೀದ್ ಕಪೂರ್ ಅವರು ನತದೃಷ್ಟ ಕ್ರಿಕೆಟಿಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲ ತೆಲುಗು ಚಿತ್ರದಲ್ಲಿ ನಾನಿ ಅಭಿನಯಿಸಿದ್ದು, ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಹಿಂದಿಯಲ್ಲಿ ಈ ಚಿತ್ರ ಡಿಸೆಂಬರ್ 31ರಂದು ತೆರೆ