ಪುಷ್ಪ ಚಿತ್ರ ತಂಡ ಮತ್ತೊಂದು ಸಪ್ರೈಸ್ ನೀಡಿದೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಾರಿಯ ಪರಿಚಯವನ್ನು ಮಾಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕ ಮಂದಣ್ಣ ನಟಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಡಾನ್ಸ್, ಫೈಟ್, ಕಾಮಿಡಿ ಸೇರಿದಂತೆ ಫುಲ್ ಪ್ಯಾಕ್ ಆಗಿರುವ ಈ ಚಿತ್ರದ ಪ್ರಮೋಷನ್ ವರ್ಕ್ ಕೂಡ ಪ್ಲಾನ್ ಪ್ರಕಾರವೇ ಮಾಡಿಕೊಂಡು ಬರುತ್ತಿದೆ ಪುಷ್ಟ ಚಿತ್ರ ತಂಡ. ಈಗಾಗಲೇ ಚಿತ್ರ ಡಿಸೆಂಬರ್ 17ಕ್ಕೆ ರಿಲೀಸ್ ಆಗಲಿದೆ. ರಿಲೀಸ್ ಗೆ ಮುನ್ನವೇ ಪುಷ್ಟ ಚಿತ್ರದ ಫಸ್ಟ್ ಲುಕ್, ಟೀಸರ್, ಹಾಡುಗಳನ್ನು ನೋಡಿರುವ ಅಭಿಮಾನಿಗಳು ಕುತೂಹಲದಿಂದ ಚಿತ್ರವನ್ನು ಎದುರು ನೋಡುತ್ತಿದ್ದಾರೆ.
ಇದೀಗ ಪುಷ್ಟ ಚಿತ್ರ ತಂಡ ಮತ್ತೊಂದು ಪಾತ್ರದಾರಿಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ದಾಕ್ಷಾಯಿಣಿ ಪಾತ್ರದಲ್ಲಿ ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಅನುಸೂಯ ಅವರು ನಟಿಸಿದ್ದಾರೆ. ಆರೋಗೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅನುಸೂಯ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನುಸೂಯ ಅವರು ದಾಕ್ಷಾಯಿಣಿ ಲುಕ್ ನಲ್ಲಿ ದುಬಾರಿ ಆಭರಣ, ದುಬಾರಿ ಸೀರೆಯನ್ನು ಉಟ್ಟುಕೊಂಡು ಖಳ ನಾಯಕಿಯ ಪಾತ್ರದಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಪುಷ್ಟಾ ಚಿತ್ರ ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಕೂಡ ಮಾಡುತ್ತಿದೆ. ಸೂಪರ್ ಸ್ಟಾರ್ ನಟ, ನಟಿಯರು ಅಭಿನಯಿಸಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ಕೂಡ ಗರಿಗೆದರಿವೆ.