ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಪೆದ್ದು ಪದ್ದಾಗಿ ಮುದ್ದುಮುದ್ದಾಗಿ ಮಾತನಾಡುತ್ತಾ ಎಲ್ರನ್ನೂ ಸಿಕ್ಕಾಪಟ್ಟೆ ಮನರಂಜಿಸಿದ್ದ ನಟಿ ಶುಭಾ ಪುಂಜಾ ಅವರು , ಬಿಗ್ ಬಾಸ್ ನಂತರದಲ್ಲೇ ಎಲ್ರಿಗೂ ಹೆಚ್ಚು ಇಷ್ಟ ಆದ್ರು.. ಇದೀಗ ಶುಭಾ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡರಿಗೆ ಇಂದು ಬರ್ತ್ ಡೇ ವಿಶ್ ಮಾಡಿ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿದ್ದರು. ಮತ್ತೊಂದು ಪೋಸ್ಟ್ ಕೂಡ ಹಾಕಿದ್ರು.. ಅದ್ರಲ್ಲಿ ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳಾದ ಅರವಿಂದ್ ಹಾಗೂ ದಿವ್ಯಾ ಉರುಡುಗರ ಜೊತೆಗೆ ಶುಭಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಶುಭಾ ಪೂಂಜಾ ರನ್ನರ್ ಅಪ್ ಅರವಿಂದ್ ಹಾಗೂ ದಿವ್ಯಾ ಉರುಡುಗರನ್ನ ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಟೋರಿಯಲ್ಲಿ ಅವಿ ಅಂಡ್ ಬಿಟ್ಟು ಎಂದು ಬರೆದು ಪೋಸ್ಟ್ ಮಾಡಿದ್ದು, ಅರವಿಂದ್ ಕೆ.ಪಿ ಗೆ ಟ್ಯಾಗ್ ಮಾಡಿದ್ದಾರೆ.