ಮುಂಬೈ : ಬ್ಲೂ ಫಿಲಮ್ ಕೇಸ್ ನಲ್ಲಿ ಕೆಲ ದಿನಗಳು ಜೈಲಿನಲ್ಲೇ ಕಾಲ ಕಳೆದು ಬಳಿಕ ಜಾಮೀನಿನ ಮೇಲೆ ಹೊರಬಂದ ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪತ್ನಿ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ರಾಜ್ ಕುಂದ್ರಾ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶಿಲ್ಪಾ ಅವರು ಪತಿ ರಾಜ್ ಕುಂದ್ರಾ ಜೊತೆ ಹಿಮಾಚಲ ಪ್ರದೇಶದ ಧರ್ಮಶಾಲಾದ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ಫೋಟೋ, ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಫೋಟೋಗಳಿಗೆ ಶಿಲ್ಪಾ ಬೆಂಬಲಿಗರು ಶಿಲ್ಪಾಗೆ ಧೈರ್ಯ ತುಂಬಿದ್ರೆ ಇನ್ನೂ ಹಲವರು ರಾಜ್ ಕುಂದ್ರಾ ಜೊತೆಗೆ ಶಿಲ್ಪಾರನ್ನೂ ಟ್ರೋಲ್ ಮಾಡ್ತಾಯಿದ್ದಾರೆ. ಅಂದ್ಹಾಗೆ ಈ ಮೂಲಕ ನಟಿ ಶಿಲ್ಪಾ ಶೆಟ್ಟಿ ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದಿದ್ದಾರೆ.. ಹೌದು ಪತಿ ರಾಜ್ ಕುಂದ್ರಾ ಜೈಲಿನಿಂದ ಬಂದಮೇಲೆ ಶಿಲ್ಪಾ ಶೆಟ್ಟಿ ಅವರ ಜೊತೆಗೆ ವಿಚ್ಛೇದನ ಪಡೆಯುತ್ತಾರೆ ಎಂದೇ ಹೇಳಲಾಗ್ತಿತ್ತು. ಆದ್ರೆ ಈಗ ಒಟ್ಟಾಗಿ ಕಾಣಿಸಿಕೊಂಡು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.