ಬೆಂಗಳೂರು : ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿ ನಿರಂತರ ಸುದ್ದಿಯಲ್ಲಿದ್ದ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಜಾಮೀನಿನ ಮೇಲೆ ಹೊರಬಂದಿದ್ದು ಕಹಿ ಘಟನೆ ಮರೆತು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.. ಅವರ ಬಳಿ ಕೆಲ ಪ್ರಾಜೆಕ್ಟ್ ಗಳಿವೆ.. ಈ ನಡುವೆ ಹಿಂದಿಯಲ್ಲೂ ಆಲ್ ಬಮ್ ಸಾಂಗ್ ನಲ್ಲಿ ನಟಿಸುತ್ತಿರುವ ಬಗ್ಗೆ ರಾಗಿಣಿ ಹೇಳಿಕೊಂಡಿದ್ದರು.
ಇದೀಗ “ಕ್ಷಮಿಸಿ ಕರ್ಮ ಹಿಂದಿರುಗಿ ಬರುತ್ತದೆ” ಅಂತ ವಾಪಸ್ ಆಗ್ತಾಯಿದ್ದಾರೆ.. ಅಂದ್ಹಾಗೆ ರಾಗಿಣಿ ಕಾಣಿಸಿಕೊಳ್ತಿರುವ ಈ ಹೊಸ ಸಿನಿಮಾದ ಟೈಟಲ್ “ SORRY Karma returns.. ಈ ಚಿತ್ರ ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ. ಸದ್ಯ ಚಿತ್ರದ ಶೂಟಿಂಗ್ ಆರಂಭ ಆಗಿದೆ.
ಕಿಸ್ ಇಂಟರ್‌ನ್ಯಾಷನಲ್ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರಕ್ಕೆ ಬ್ರಹ್ಮ ಎನ್ನುವವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಹಾಲಿವುಡ್‌ನ ಟಾಮ್ ಅಂಡ್ ಜೆರಿ ಚಿತ್ರಕ್ಕೆ ಕೆಲಸ ಮಾಡಿದ್ದ ಅನಿಮೇಷನ್ ತಂಡ ಈ ಚಿತ್ರವನ್ನ ಸೇರಿ ಕೊಳ್ಳಲಿದೆ ಎಂದು ರಾಗಿಣಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.