ಚೆನ್ನೈ : ಮಾಸ್ಟರ್ ಸಿನಿಮಾದ ನಂತರ ತಮಿಳಿನ ಸ್ಟಾರ್ ನಟ ವಿಜಯ್ ತಮ್ಮ 65ನೇ ಸಿನಿಮಾ “ಬೀಸ್ಟ್” ನಲ್ಲಿ ಬ್ಯುಸಿಯಾಗಿದ್ದಾರೆ.. ಶೂಟಿಂಗ್ ಕೂಡ ಅದ್ಧೂರಿಯಿಂದ ಸಾಗುತ್ತಿದೆ.. ಕೋಟಿ ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ಮಾಡಿಸಲಾಗ್ತಿದೆ.. ಆದ್ರೆ ಇದೀಗ ಕೋಟ್ಯಾಂತರ ರೂಪಾಯಿ ವೆಚ್ಚದ ಸೆಟ್ ಧಾರಾಕಾರ ಮಳೆಯಿಂದಾಗಿ ಜಲಾವೃತಗೊಂಡಿದೆ..
ಹೌದು.. ತಮಿಳುನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ಇದ್ರಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಬೀಸ್ಟ್ ಸಿನಿಮಾಗೂ ಕಂಟಕ ಆಗಿದೆ. ನಿರಂತರ ಮಳೆಯಿಂದ ಸಿನಿಮಾ ತಂಡಕ್ಕೆ ಬಿಕ್ಕಟ್ಟು ಎದುರಾಗಿದೆ. ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬೀಸ್ಟ್ ಚಿತ್ರ ತಂಡ ಅದ್ದೂರಿ ಸೆಟ್ ನಿರ್ಮಾಣ ಮಾಡಿತ್ತು. ಫಿಲ್ಮ್ ಸ್ಟೂಡಿಯೋದಲ್ಲಿ ಬೃಹತ್ ಮಾಲ್ ಸೆಟ್ ಹಾಕಲಾಗಿತ್ತು. ಆದರೆ ಈಗ ಆ ಮಾಲ್ ಸೆಟ್ಗೆ ಮಳೆ ಅಡಚಣೆ ಉಂಟುಮಾಡಿದೆ.
ಚೆನ್ನೈನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಚಿತ್ರತಂಡ ನಿರ್ಮಾಣ ಮಾಡಿದ ಮಾಲ್ ಸೆಟ್ ಜಲಾವೃತ ಆಗಿದೆ. ಈಗ ಚಿತ್ರ ತಂಡಕ್ಕೆ ಸೆಟ್ ಸರಿಪಡಿಸಲು ಸಮಯ ಬೇಕಾಗುತ್ತದೆ. ಹಾಗಾಗಿ ಚಿತ್ರೀಕರಣ ಮತ್ತೆ ಕೆಲವು ದಿನ ಮುಂದೆ ಹೋಗುವ ಸಾಧ್ಯತೆ ಇದೆ. ಇನ್ನೂ ಇತ್ತೀಚೆಗೆ ಸಿನಿಮಾತಂಡದಿಂದ ಬಂದಿದ್ದ ಪ್ರಕಾರ ಸಿನಿಮಾದ ಚಿತ್ರೀಕರಣ ಇದೇ ತಿಂಗಳ ಕೊನೆಯೊಳಗೆ ಮುಗಿಯಬೇಕಾಗಿತ್ತು.. ಆದ್ರೆ ಸಿನಿಮಾತಂಡದ ಪ್ಲಾನ್ ಅನ್ನ ಮಳೆರಾಯ ಹಾಳುಮಾಡಿದ್ದಾನೆ..
ಸಿನಿಮಾದ ಶೂಟಿಂಗ್ ನಿಗದಿತ ಸಮಯದಲ್ಲಿ ಮುಗಿಯದೇ ಮತ್ತಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.. ಚೆನ್ನೈನಲ್ಲಿ ನೆಡೆಯಲಿರುವ ಚಿತ್ರೀಕರಣಕ್ಕೆ ನಟಿ ಪೂಜಾ ಹೆಗ್ಡೆ ಸೇರಿಕೊಳ್ಳಲಿದ್ದಾರೆ. ಸದ್ಯ ಜಾರ್ಜಿಯಾ ದೇಶದಲ್ಲಿ ಬೀಸ್ಟ್ ಚಿತ್ರತಂಡ ಬೀಡು ಬಿಟ್ಟಿದ್ದು, ಅಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬೀಸ್ಟ್ ಚಿತ್ರವನ್ನು ನೆಲ್ಸನ್ ದಿಲಿಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ ವಿಜಯ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.