ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಆಗಿ ಟಾಲಿವುಡ್ ಗೆ ಹಾರಿ ಅಲ್ಲಿಯೂ ಮಿಂಚಿ, ನಂತರ ಟಾಲಿವುಡ್ ಈಗ ಬಾಲಿವುಡ್ ನಲ್ಲಿ ಮಿನುಗುತ್ತಿರುವ ಕಿರಿಕ್ ಬೆಡಗಿ ರಶ್ಮಿಕಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ..
ಸಿನಿಮಾಗಳು ಅಷ್ಟೇ ಅಲ್ದೇ ಆಡ್ ಗಳಲ್ಲೂ ಕಾಣಿಸಿಕೊಳ್ತಿರುವ ರಶ್ಮಿಕಾ ಹಲವಾರು ಪ್ರತಿಷ್ಠಿತ ಕಂಪನಿಗಳ ರಾಯಭಾರಿ ಕೂಡ ಆಗಿದ್ದಾರೆ. ಅದ್ರಂತೆ ಅವರು ಮ್ಯಾಕ್ ಡೊನಾಲ್ಡ್ಸ್ ನ ಭಾರತದ ರಾಯಭಾರಿ ಎನ್ನುವುದು ಗೊತ್ತೇ ಇದೆ.. ಈ ನಡುವೆ ಮ್ಯಾಕ್ ಡೊನಾಲ್ಡ್ಸ್ ಕಂಪನಿ ರಶ್ಮಿಕಾ ಹೆಸರಲ್ಲಿ ಊಟವನ್ನೂ ( Rashmika meal) ನೀಡುತ್ತಿದೆ.
ಮ್ಯಾಕ್ ಡೊನಾಲ್ಡ್ಸ್ ನಲ್ಲಿ “ರಶ್ಮಿಕಾ ಮೀಲ್” ಪರಿಚಯಿಸಲಾಗಿದೆ.. ಅಮೆರಿಕಾ ಮೂಲದ ಕಂಪನಿಯಾಗಿರೋ ಮೆಕ್ ಡೊನಾಲ್ಡ್ಸ್ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್. ದೇಶದ ಹಲವು ನಗರಗಳಲ್ಲಿ ಬ್ರಾಂಚಸ್ ಇದೆ.. ಮ್ಯಾಕ್ ಡೊನೊಲ್ಡ್ಸ್ ತನ್ನ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಿಸಿಕೊಳ್ಳಲು ತನ್ನ ರಾಯಭಾರಿಯಾಗಿರೋ ರಶ್ಮಿಕಾ ಮಂದಣ್ಣ ಹೆಸರಲ್ಲಿ ಮೀಲ್ ಪರಿಚಯಿಸಿದೆ.
ಅಲ್ದೇ ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ ಈ ಮೀಲ್ ನ ಹೇಗೆ ತಿನ್ಬೇಕು ಅನ್ನೋದನ್ನೂ ಕೂಡ ತೋರಿಸಿದ್ದಾರೆ.. ಮೊದಲು ಸ್ಪೈಸೀ ಫ್ರೈಡ್ ಚಿಕನ್ ತಿನ್ನಬೇಕು. ಆನಂತರ ಮಿಕ್ಸ್ ಸ್ಪೈಸಿ ಚಿಕನ್ ಬರ್ಗರ್ ಜೊತೆ ಪಿರಿಪಿರಿ ಫ್ರೈಸ್ ಸೇವಿಸಬೇಕು. ಆ ಮೇಲೆ ನಿಂಬೂ ಫಿಜ್ ಕುಡಿಯಬೇಕು. ಕೊನೆಯದಾಗಿ ಮ್ಯಾಕ್ ಫ್ಲರಿ ಐಸ್ ಕ್ರೀಮ್ ಸವಿಯಬೇಕು ಎಂದು ರಶ್ಮಿಕಾ ಮಂದಣ್ಣ ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರೋ ವಿಡಿಯೋದಲ್ಲಿ ವಿವರಿಸಿದ್ದಾರೆ.