ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಹಾಗೂ ಪತಿ ಅಮೆರಿಕಾದ ಫೇಮಸ್ ಪಾಪ್ ಸಿಂಗರ್ ನಿಕ್ ಜಾನಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಅಭಿಮಾನಿಗಳನ್ನ ಆತಂಕಕ್ಕೆ ದೂಡಿತ್ತು.. ಇದಕ್ಕೆ ಕಾರಣ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಿಂದ ಪತಿಯ ಹೆಸರನ್ನ ಕೈಬಿಟ್ಟಿದ್ದು.. ಸಮಂತಾ ನಾಗಚೈತನ್ಯ ಬಳಿಕ ಈ ದಂಪತಿ ಡಿವೋರ್ಸ್ ಪಡೆಲಿದೆ ಎಂದೇ ಹೇಳಲಾಗಿತ್ತು..
ಆದ್ರೆ ಪತಿ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದ ವಿಡಿಯೋಗೆ ಪ್ರಿಯಾಂಕಾ ಅವರು ಸ್ವೀಟಾಗಿ ಕಮೆಂಟ್ ಮಾಡೋ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ರು… ಅಲ್ಲದೇ ನಿಕ್ ಜೋನಸ್ , ಸಹೋದರರ ‘ಫ್ಯಾಮಿಲಿ ರೋಸ್ಟ್’ ಶೋನಲ್ಲಿ ಭಾಗಿಯಾಗಿದ್ದರು.. ಈ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ರು. ಆದ್ರೆ ಜೋನಸ್ ಹೆಸರು ಬಿಟ್ಟಿದ್ಕ್ಕೆ ಮಾತ್ರ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ.. ಆದ್ರೆ ಇದೆಲ್ಲಾ ಜಸ್ಟ್ ಗಿಮಿಕ್ ಅಷ್ಟೇ ಡ್ರಾಮಾ ಅಸ್ಟೇ ಅನ್ನೋ ಸುದ್ದಿ ಹರಿದಾಡ್ತಿದ್ದು, ಪಿಗ್ಗಿ ಹಾಗೂ ಜೋನಸ್ ದಂಪತಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ..
ಹೌದು… ಪ್ರಿಯಾಂಕಾ ಹೀಗೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹಾಗಾಗಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಈಗ ಪತಿಯೊಂದಿಗಿನ ಫೊಟೋವನ್ನು ಹಂಚಿಕೊಂಡು ವಿಚ್ಛೇದನ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.. ಪ್ರಿಯಾಂಕಾ ಅವರ ಪೋಸ್ಟ್ ಟೀಕೆಗೆ ಗುರಿಯಾಗಿದೆ. ಪ್ರಿಯಾಂಕಾ ತನ್ನ ಹೆಸರು ಬದಲಾಯಿಸಿರುವುದು ದೊಡ್ಡ ಗಿಮಿಕ್ ಎಂದು ಸಾಕಷ್ಟು ಜನ ಪ್ರಿಯಾಂಕಾ ಅವರ ಪೋಸ್ಟ್ಗೆ ಟೀಕೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಪ್ರಿಯಾಂಕಾ ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಪ್ರಿಯಾಂಕಾ -ನಿಕ್ ಅವರನ್ನೂ ಟ್ರೋಲ್ ಮಾಡ್ತಾಯಿದ್ದಾರೆ.
ಪ್ರಿಯಾಂಕಾ ಚೋಪ್ರಾ ತನ್ನ ಪತಿಯ ಹೆಸರನ್ನು ಕೈ ಬಿಟ್ಟಿದ್ದು ಕೇವಲ ಪ್ರಚಾರಕ್ಕಾಗಿ ಎನ್ನಲಾಗುತ್ತಿದೆ. ಯಾಕೆಂದರೆ ಪ್ರಿಯಾಂಕಾ ತನ್ನ ಹೆಸರು ಬದಲಿಸಿದ ಮರು ದಿನವೇ ಪತಿಯ ಹೊಸ ಕಾರ್ಯಕ್ರಮ ಫ್ಯಾಮಿಲಿ ರೋಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿಕ್ ಜೊತೆಗೆ ಅವರ ಇಬ್ಬರು ಸಹೋದರರೂ ಕೂಡ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪತಿಯನ್ನು ರೋಸ್ಟ್ ಮಾಡಿದ ಪ್ರಿಯಾಂಕಾ ಹಾಸ್ಯಾಸ್ಪದವಾಗಿ ಕುಟುಂಬದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಪ್ರಿಯಾಂಕಾ ಪತಿಯ ಹೆಸರು ಬದಲಿಸಿ ಸುದ್ದಿ ಆಗಿದ್ದರು ಎನ್ನಲಾಗುತ್ತಿದೆ. ಈಗ ಪ್ರಿಯಾಂಕಾ ಹಾಕಿರುವ ಫೊಟೋಗೆ ಟೀಕೆಗಳು ವ್ಯಕ್ತವಾಗುತ್ತಿವೆ.ಆದ್ರೂ ಸಹ ಪ್ರಿಯಾಂಕಾ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..