ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಖಾರವಾಗಿ ಎಲ್ಲದಕ್ಕೂ ಉತ್ತರ ನೀಡಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡೇ ಅಭ್ಯಾಸ.. ದೊಡ್ಡ ದೊಡ್ಡ ವ್ಯಕ್ತಿಗಳನ್ನೇ ಕಂಗನಾ ಎದುರು ಹಾಕಿಕೊಳ್ತಾಯಿರುತ್ತಾರೆ.. ಜೊತೆಗೆ ಹಿಂದುತ್ವ, ಬಿಜೆಪಿ ಬಗ್ಗೆಯೂ ಹೆಚ್ಚಾಗಿಯೇ ಪೋಸ್ಟ್ ಗಳನ್ನ ಹಾಕುತ್ತಾ ಅನೇಕರನ್ನ ತಮ್ಮ ಫ್ಯಾನ್ ಗಳನ್ನಾಗಿಸಿಕೊಂಡಿರುವ ಕಂಗನಾಗೆ ಶತ್ರುಗಳೇನು ಕಡಿಮೆಯಿಲ್ಲ..
ಇದೀಗ ಬಾಲಿವುಡ್ ನ ‘ಕ್ವೀನ್’ ಕಂಗನಾಗೆ ಕೊಲೆ ಬೆದರಿಕೆ ಹಾಕಲಾಗಿದೆ.. ಈ ಬಗ್ಗೆ ಆರೋಪಿಸಿ ಕಂಗನಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆ ಬೆದರಿಕೆ ಸಂಬಂಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಎಫ್ಐಆರ್ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಗನಾ, ಮುಂಬೈನಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ. ಹಿಂದಿಯಲ್ಲಿ ಬರೆದುಕೊಂಡಿರುವ ಅವರು, ದೇಶದ್ರೋಹಿಗಳನ್ನು ಮೆರೆಯಬಾರದು ಮತ್ತು ಕ್ಷಮಿಸಲೂಬಾರದು. ಹಣ, ಅಧಿಕಾರ ಗಳಿಸುವ ಹಾಗೂ ಭಾರತಕ್ಕೆ ಕಳಂಕ ತರಲು ಸಿಗುವ ಒಂದು ಅವಕಾಶವನ್ನೂ ದೇಶದ್ರೋಹಿಗಳು ಕಳೆದುಕೊಳ್ಳುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನನಗೆ ಕೆಲವರಿಂದ ಕೊಲೆ ಬೆದರಿಕೆ ಕರೆಗಳು ಬಂದಿವೆ. ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವ ಹಾಗೂ ಉಗ್ರರ ಪಡೆಗಳ ವಿರುದ್ಧ ನಾನು ಸದಾ ಮಾತನಾಡುತ್ತೇನೆ. 80 ರ ದಶಕದಲ್ಲಿ ಪಂಜಾಬ್ನಲ್ಲಿ ಗುರುಗಳ ಪುಣ್ಯಭೂಮಿಯನ್ನು ನಾಶಗೊಳಿಸಿ ಖಲಿಸ್ತಾನ ಮಾಡುವ ಕನಸು ಕಾಣುತ್ತಿರುವ ನಕ್ಸಲರಿರಲಿ, ತುಕ್ಡೆ ತುಕ್ಡೆ ಗ್ಯಾಂಗ್ಗಳಿರಲಿ, ವಿದೇಶದಲ್ಲಿ ಕುಳಿತಿರುವ ಉಗ್ರರಿರಲಿ. ಅವರ ವಿರುದ್ಧ ನಾನು ದನಿಯೆತ್ತುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಜಾಪ್ರಭುತ್ವವೇ ನಮ್ಮ ದೇಶದ ಬಹುದೊಡ್ಡ ಶಕ್ತಿ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ. ಆದರೆ ನಾಗರಿಕರ ಸಮಗ್ರತೆ, ಏಕತೆ, ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಹಕ್ಕನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮಗೆ ನೀಡಿದೆ ಎಂದು ದಿಟ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ..