ಬೆಂಗಳೂರು: ಬೆಂಗಳೂರು : ಸ್ಯಾಂಡಲ್ ವುಡ್ ನ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ 1 ತಿಂಗಳೇ ಕಳೆದಿದೆ.. ಆದ್ರೂ ಆ ನೋವು ಇನ್ನೂ ಮಾಸಿಲ್ಲ.. ಆ ಕಹಿ ಸತ್ಯ ಅರಿಗಿಸಿ ಕೊಳ್ಳೋದಕ್ಕೆ ಕುಟುಂಬ ಹಾಗೂ ಕರ್ನಾಟಕದ ಜನರಿಂದ ಸಾಧ್ಯವಾಗ್ತಿಲ್ಲ.. ಆದ್ರೆ ಅಪ್ಪು ಅವರ ಅಗಲಿಕೆ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರ ಭಾಷಾ ಸಿನಿಮಾ ರಂಗದವರಿಗೆ ಆಘಾತ , ನೋವುಂಟುಮಾಡಿದೆ.. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕನಸು ನನಸಾಗುವ ಸಮಯ ಬಂದಿದೆ.. ಅಪ್ಪು ಕನಸಿನ ಯೋಜನೆ, ವನ್ಯಜೀವಿ ಆಧಾರಿತ ಚಿತ್ರ ‘ಗಂಧದ ಗುಡಿ’ಯ ಟೀಸರ್ ಇದೇ 6ಕ್ಕೆ ರಿಲೀಸ್ ಆಗಲಿದೆ ಎಂದು.
ನಟ ಶಿವರಾಜ್ಕುಮಾರ್ ದಂಪತಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರಿಗೆ ಆಹ್ವಾನ ನೀಡಿದರು. ಅಪ್ಪು ಅಗಲಿದ್ದರೂ ಕೂಡ ಅವರ ಕನಸಿನ ಯೋಜನೆಗಳು ಮುಂದುವರಿಯುತ್ತವೆ ಎಂದು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಕೆಲ ದಿನಗಳ ಹಿಂದೆ ಘೋಷಿಸಿದ್ದರು.
ಅಪ್ಪು ಅವರ ಕನಸೊಂದು 2021 ದಿಸೆಂಬರ್ 1ರಂದು ಬೆಳಕಿಗೆ ಬರಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇಯಾಗಿದೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯವರೆಗೆ ನೀವು ತೋರಿಸಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಅಪ್ಪು ನಮ್ಮನ್ನೆಲ್ಲ ಅಗಲಿರಲಿಲ್ಲ ಅಂದಿದ್ದರೆ ನವೆಂಬರ್ 1 ರಂದು ‘ಗಂಧದ ಗುಡಿ’ ಟೀಸರ್ ರಿಲೀಸ್ ಆಗಬೇಕಿತ್ತು.