ಭಾರತೀಯ ಸಿನಿಮಾರಂಗದ ಸ್ಟಾರ್ ನಟಿ , ಒಂದು ಕಾಲದಲ್ಲಿ ಇಡೀ ಸಿನಿಮಾರಂಗದಲ್ಲೇ ಟಾಪ್ ನಟಿ ಎನಿಸಿಕೊಂಡಿದ್ದ ನಟಿ ಐಶ್ವರ್ಯ ರೈ ಜಲ್ವಾ ಹಾಲಿವುಡ್ ನಲ್ಲಿ ಮೂಡಿತ್ತು..
ಬಾಲಿವುಡ್ , ಕಾಲಿವುಡ್ , ಹಾಲಿವುಡ್ ಸಿನಿಮಾಗಳಲ್ಲೂ ಐಶ್ವರ್ಯಾ ಮಿಂಚಿದ್ದರು.. ಆದ್ರೆ ಮಗುವಿಗೆ ತಾಯಾದ ನಂತರ ಐಶ್ವರ್ಯಾ ಸಿನಿಮಾಗಳಿಂದ ಧೀರ್ಘವಾದ ಬ್ರೇಕ್ ಪಡೆದಿದ್ದರು.. ಇದೀಗ ಐಶು ಮತ್ತೆ ಕಮ್ ಬ್ಯಾಕ್ ಪಮಾಡೋದಕ್ಕೆ ರೆಡಿಯಾಗಿದ್ದಾರೆ.. ಅಂದ್ಹಾಗೆ ಐಶು ಲೇಟಾಗಿ ಕಮ್ ಬ್ಯಾಕ್ ಮಾಡ್ತಿದ್ರೂ ಧಮಾಕೇದಾರ್ ಎಂಟ್ರಿಕೊಡ್ತಿದ್ದಾರೆ.. ಹೌದು ಐಶು ಬಾಲಿವುಡ್ ಸಿನಿಮಾ ಮೂಲಕ ಅಲ್ಲ ಬದಲಾಗಿ ಹಾಲಿವುಡ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡ್ತಾಯಿದ್ದಾರೆ..
ಈ ಹಿಂದೆ 2004ರಲ್ಲಿ ‘ಬ್ರೈಡ್ ಅಂಡ್ ಪ್ರಿಜುಡೀಸ್’ ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಿಸಿದ್ದರು. ಈ ಮೂಲಕ ಐಶ್ವರ್ಯ ಅಂತರರಾಷ್ಟ್ರೀಯ ಸಿನಿಮಾ ಮೂಲಕ ಹೊಸ ಮೈಲುಗಲ್ಲು ಸೃಷ್ಟಿ ಮಾಡಿದ್ದರು . ಇದೀಗ ಲಾಂಗ್ ಗ್ಯಾಪ್ ಮೂಲಕ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸೋಕೆ ಸಜ್ಜಾಗಿದ್ದಾರೆ.
ಐಶ್ವರ್ಯ ರೈ ಅಭಿನಯಿಸುತ್ತಿರುವ ಈ ಚಿತ್ರವನ್ನು ಗಾಯಕಿ, ಬರಹಗಾರ್ತಿ ಇಶಿತಾ ಗಂಗೂಲಿ ನಿರ್ದೇಶನ ಮಾಡುತ್ತಿದ್ದಾರೆ. ಇದು ರವೀಂದ್ರನಾಥ್ ಟ್ಯಾಗೋರ್ ಅವರ ಕಾದಂಬರಿ ‘ಥ್ರಿ ವುಮೆನ್ಸ್’ ಆಧಾರಿತ ಚಿತ್ರವಾಗಿದೆ. ಇದು ಒಂದು ಇಂಡೋ-ಅಮೆರಿಕನ್ ಸಿನಿಮಾವಾಗಿದೆ. ಚಿತ್ರಕ್ಕೆ ‘ದಿ ಲೆಟರ್’ ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭ ಆಗಲಿದೆ ಎನ್ನುವ ಮಾಹಿತಿ ಹೊರ ಬಂದಿದೆ.