ರಶ್ಮಿಕಾಗೆ ಎಲ್ಲಾ ಭಾಷೆಯಲ್ಲೂ ಫೇವರೇಟ್ ನಟರಿದ್ದಾರೆ , ಆದ್ರೆ ಕನ್ನಡದಲ್ಲಿ ಬಿಟ್ಟು….!
ಕನ್ನಡ ಸಿನಿಮಾರಂಗದ ಮೂಲಕ ಮೆರೆದಿದ್ದು ರಶ್ಮಿಕಾ ಮಂದಣ್ಣ.. ಇಡೀ ಸಿನಿಮಾರಂಗಕ್ಕೆ ಪರಿಚಯ ಮಾಡಿಸಿದ್ದೇ ಕನ್ನಡ ಸಿನಿಮಾ.. ಕಿರಿಕ್ ಪಾರ್ಟಿ ಸಿನಿಮಾ.. ಈ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ರಾದ್ರೂ ಅವರಿಗೆ ಬೇರೆ ಭಾಷೆ ನಟ ನಟಿಯರು , ಸಿನಿಮಾ ಮೇಲಿರುವ ಒಲವು , ಕನ್ನಡದ ಮೇಲಿಲ್ಲಾ ಅನ್ನೋದನ್ನ ಅನೇಕ ಬಾರಿ ಅವರೇ ತಮ್ಮ ನಡೆಯಿಂದ ಸಾಬೀತು ಮಾಡಿದ್ದಾರೆ..
ಈಗಾಗಲೇ ಕನ್ನಡ ಸಿನಿಮಾರಂಗದಿಂದ ಸಂಪೂರ್ಣ ಹೊರಗುಳಿದ ರಶ್ಮಿಕಾ ಬಾಲಿವುಡ್ , ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.. ಸಾಲು ಸಾಲು ಸಿನಿಮಾಗಳನ್ನ ಸ್ಟಾರ್ ನಟರ ಜೊತೆಗೆ ಮಾಡ್ತಾಯಿದ್ದಾರೆ.. ಆದ್ರೆ ರಶ್ಮಿಕಾ ಆಗಾಗ ಕನ್ನಡದವರ ಕೆಂಗಣ್ಣಿಗೆ ಗುರಿಯಾಗುವಂತಹದ್ದೇ ಕೆಲಸ ಮಾಡ್ತಾಯಿರುತ್ತಾರೆ.. ಈಗ್ಲೂ ಅಂತಹದ್ದೇ ಒಂದು ಕೆಲಸ ಮಾಡಿ ಮತ್ತಷ್ಟು ಕನ್ನಡವರರ ಆಕ್ರೋಶ ಹೆಚ್ಚಿಸಿದ್ದಾರೆ..
ಇತ್ತೀಚೆಗೆ ಖ್ಯಾತ ನಿರೂಪಕ ಫೇರಿಡೂನ್ ಶಹ್ರ್ಯಾರ್ ಅವರ ಖಾಸಗಿ ಸಂದರ್ಶನದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದರು. ಈ ಸಂದರ್ಶನದಲ್ಲಿ ರಶ್ಮಿಕಾ ಅವರಿಗೆ ಸಿನಿಮಾಗೆ ಸಂಬಂಧ ಪಟ್ಟ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಕೇಳಿದ್ದ ಒಂದು ಪ್ರಶ್ನೆಗೆ ಅವರು ನೀಡಿದ್ದ ಉತ್ತರ ಕನ್ನಡಿಗರಿಗೆ ರಶ್ಮಿಕಾ ಮೇಲೆ ಮತ್ತಷ್ಟು ಸಿಟ್ಟು ಬರಲು ಕಾರಣವಾಗಿದೆ..
ರಶ್ಮಿಕಾಗೆ ನಿಮ್ಮ ಫೇವರಿಟ್ ಸಹ ಕಲಾವಿದ ಯಾರು ಎಂದು ಕೇಳಲಾಗಿದೆ. ಇದಕ್ಕೆ ರಶ್ಮಿಕಾ ನಾನು ಇದಕ್ಕೆ ಉತ್ತರಿಸೋದಿಲ್ಲ ಎಂದಿದ್ದಾರೆ. ನಂತರ ತುಂಬಾ ಯೋಚನೆ ಮಾಡಿ ಅಮಿತಾಬ್ ಬಚ್ಚನ್ ಎಂದು ಉತ್ತರ ನೀಡಿದ್ದಾರೆ. ನಂತರ ಇಂಡಿಯನ್ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್ ನಟರು ಯಾರು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಬಾಲಿವುಡ್ ನಲ್ಲಿ ರಣ್ ಬೀರ್ ಕಪೂರ್, ತೆಲುಗಿನಲ್ಲಿ ಅಲ್ಲು ಅರ್ಜುನ್, ಮಲಯಾಳಂನಲ್ಲಿ ಫಹಾದ್ ಮತ್ತು ತಮಿಳಿನಲ್ಲಿ ವಿಜಯ್ ಸೇತುಪತಿ ಎಂದು ಉತ್ತರಿಸಿದ್ದಾರೆ.. ಅಲ್ಲಿ ಪಾಪ ರಶ್ಮಿಕಾ ಅವರಿಗೆ ಕನ್ನಡದ ಸ್ಟಾರ್ ನಟರು ನೆನಪೇ ಆಗಿಲ್ಲ ಅತ ಕಾಣುತ್ತೆ..
ರಶ್ಮಿಕಾಗೆ ಚಾನ್ಸ್ ಕೊಟ್ಟ ಸಿನಿಮಾದ ಸ್ಟಾರ್ ನಾಯಕ ರಕ್ಷಿತ್ ಶೆಟ್ಟಿ ಇರಬಹುದು, ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ಗೋಲ್ಡನ್ ಸ್ಟಾರ್ ಗಣೇಶ್ , ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೇ ಇರಬಹುದು.. ಈ ರೀತಿ ಇಂತಹ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮೇಡಂ ಕೇವಲ ಬೇರೆ ಭಾಷೆಗಳ ಸಿನಿಮಾಗಳ ಫೇವರೇಟ್ ನಾಯಕರ ಹೆಸರು ಮಾತ್ರ ಹೇಳಿ ಮತ್ತೊಮ್ಮೆ ತಮ್ಮ ಮನಸ್ಸಿನಲ್ಲಿ ಕನ್ನಡದ ಮೇಲಿನ ತಾತ್ಸಾರವಿರುವುದಕ್ಕೆ ಸಾಕ್ಷಿ ನೀಡಿದ್ದಾರೆ..
ಕನ್ನಡದಲ್ಲೇ ಹುಟ್ಟಿದ್ರು ಕನ್ನಡ ಮಾತಾಡೋಕೆ ಸರಿಯಾಗಿ ಬರಲ್ಲ ಅಂತ ಹೇಳಿ ಕನ್ನಡದವರ ಹೃದಯದಿಂದ ಈಗಾಗಲೇ ದೂರವಾಗಿರೋ ರಶ್ಮಿಕಾ ನಡೆ ಈಗ ಮತ್ತೊಮ್ಮೆ ಕನ್ನಡಾಭಿಮಾನಿಗಳನ್ನ ಕೆರಳಿಸಿದೆ. ತಾವು ಬೆಳೆದ ದಾರಿ , ತಮ್ಮ ಯಶಸ್ಸಿಗೆ ಸಹಾಯ ಮಾಡಿದ ಏಣಿಯನ್ನೇ ರಶ್ಮಿಕಾ ಎಡಗಾಲಿನಲ್ಲಿ ಒದ್ದು ಹೋದವರಂತೆ ಅವರ ವರ್ತನೆ ಕಾಣ್ತಿದೆ..