ಹೊಸ ಪ್ರಯತ್ನಕ್ಕೆ ಕೈಹಾಕಿದ ಲೇಡಿ ಸೂಪರ್ ಸ್ಟಾರ್ ನಯನತಾರಾ..!
ಸಿನಿಮಾರಂಗದಲ್ಲಿ ಬಹುಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡು ತಮ್ಮದೇ ಛಾಪು ಮೂಡಿಸಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಈಗ ಬ್ಯುಸಿನೆಸ್ ವುಮೆನ್… ಹೌದು ಸಿನಿಮಾಗಳಲ್ಲಿ ಬ್ಯುಸಿಯಿದ್ರೂ ನಯನತಾರಾ ಹೊಸ ಬ್ಯುಸಿನೆಸ್ ಗೆ ಕೈಹಾಕಿದ್ದಾರೆ… ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ನಿರ್ಮಾಪಕಿಯಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ, ನಯನತಾರಾ ಈಗ ಬ್ಯುಸಿನೆಸ್ ಗೆ ಇಳಿದಿದ್ದಾರೆ. ಲಿಪ್ ಬಾಮ್ ಒಂದನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ನಯನತಾರಾ ಹೊಸ ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ಸ್ಥಾಪಿಸಿದ್ದು, ಹಲವು ಬಗೆಯ ಸೌಂದರ್ಯವರ್ಧಕಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ತಮ್ಮ ಸೌಂದರ್ಯವರ್ಧಕ ಸಂಸ್ಥೆಗೆ ‘ದಿ ಲಿಪ್ ಬಾಮ್ ಕಂಪನಿ’ ಎಂದು ಹೆಸರಿಟ್ಟಿದ್ದಾರೆ. ಖ್ಯಾತ ಸೌಂದರ್ಯ ತಜ್ಞೆ ರೆನಿತಾ ರಾಜನ್ ಅವರ ಜೊತೆ ಸೇರಿ ಈ ಸಂಸ್ಥೆ ಪ್ರಾರಂಭಿಸಿದ್ದಾರೆ.
‘ದಿ ಲಿಪ್ ಬಾಮ್ ಕಂಪೆನಿ’ಯು ಎಲ್ಲ ವರ್ಗದವರಿಗೆ, ಲಿಂಗದವರಿಗೆ ಹೊಂದುವಂತ ಲಿಪ್ ಬಾಮ್ ಅನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ನಯನತಾರಾ, ‘ಚರ್ಮದ ಸುರಕ್ಷತೆ ವಿಷಯ ಬಂದಾಗ ಕಾಂಪ್ರಮೈಸ್ ಮಾಡಿಕೊಳ್ಳಲಾಗದು. ಹಾಗಾಗಿ ಹೆಚ್ಚು ಪರಿಣಾಮಕಾರಿಯಾದ ಹಾಗೂ ಹಾನಿಕಾರಕವಲ್ಲದ ಉತ್ಪನ್ನಗಳನ್ನು ನೀಡುವುದೇ ನಮ್ಮ ಮೊದಲ ಧ್ಯೇಯ. ನಾನು ವೈಯಕ್ತಿಕವಾಗಿ ಯಾವ ಸೌಂದರ್ಯವರ್ಧಕಗಳನ್ನು ಬಳಸುತ್ತೇನೆಯೋ ಅದರಲ್ಲಿ ನನಗೆ ಯಾವ ಗುಣಗಳು ಇಷ್ಟವೋ ಅದೇ ಅಂಶಗಳನ್ನು ಗ್ರಾಹಕರಿಗೂ ನೀಡಲು ನಾವು ಬಯಸುತ್ತೇವೆ’ ಎಂದಿದ್ದಾರೆ.
ವೈದ್ಯೆ ರೆನಿತಾ ರಾಜನ್ ಅವರ ಜೊತೆ ಕೈಜೋಡಿಸಿರುವುದು ಬಹಳ ಹೆಮ್ಮೆಯ ವಿಷಯ. ‘ದಿ ಲಿಪ್ ಬಾಮ್ ಕಂಪೆನಿ’ಯ ಮೊದಲ ಲಿಪ್ ಬಾಮ್ ಅನ್ನು ಕೈಗೆತ್ತಿಕೊಂಡಾಗಲೇ ನನಗೆ ಅನ್ನಿಸಿತ್ತು ಈ ಸಂಸ್ಥೆಯ ಪಾಲುದಾರಳಾಗಲೇಬೇಕೆಂದು. ಪ್ರೀಮಿಐಂ ಆಗಿರುವ ಪ್ರಾಡೆಕ್ಟ್ ಅನ್ನು ನಾವು ನೀಡುತ್ತಿದ್ದೇವೆ ಎಂದಿದ್ದಾರೆ.
ಸದ್ಯ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಪೃಥ್ವಿರಾಜ್ ಸುಕುಮಾರನ್ ಅವರ ಗೋಲ್ಡ್ ಸಿನಿಮಾ , ಶಾರುಖ್ ಖಾನ್ ಜೊತೆಗೆ ಲಯನ್, ಕೂಳಂಗಳ್, ಚಿರಂಜೀವಿ ಅವರ ಜೊತೆ ಗಾಡ್ ಫಾದರ್, ಒರು ಕುರಿವಿ, ಕಾತ್ತು ವಾಕುಲ ರೆಂಡು ಕಾದಲ್, ಕನೆಕ್ಟ್ , ತ್ರಿಷಾ , ಪಾಟು ಸಿನಿಮಾಗಳಲ್ಲಿ ನಟಿಸಲಿದ್ದಾರೆ.