ರೈಸ್ ಆಫ್ ರಾಮ್, RRR ಅಡ್ಡಾದಿಂದ ಮತ್ತೊಂದು ಸಾಂಗ್ ರಿಲೀಸ್…
ಭಾರತದ ಸಿನಿಮಾ ರಂಗದಲ್ಲಿ ಅದ್ಬುತ ದೃಶ್ಯಕಾವ್ಯ ನಿರ್ಮಿಸಿಸುವ ಜಕ್ಕಣ್ಣ ಆಲಿಯಾಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ.
ರಾಮ್ ಚರಣ್ ಅವರ ಇಂಟ್ರಡಕ್ಷನ್ ಸಾಂಗ್ ರೈಸ್ ಆಫ್ ರಾಮ್ ಹಾಡನ್ನ ಚಿತ್ರತಂಡ ನಿನ್ನೆ ರಾತ್ರಿ ಬಿಡುಗಡೆ ಮಾಡಿದೆ. ರಾಮಂ ರಾಘವಂ ಎಂದು ಶುರುವಾಗುವ ಈ ಹಾಡನ್ನ ಕನ್ನಡದ ಖ್ಯಾತ ಹಾಡುಗಾರ ವಿಜಯ್ ಪ್ರಕಾಶ್ ಮತ್ತು ತಂಡದವರು ಹಾಡಿದ್ದಾರೆ.
ಎಸ್ ಎಸ್ ರಾಜಮೌಳಿ ಚಿತ್ರತಂಡದ ಆಸ್ಥಾನ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ಕೆ ಶಿವದತ್ತ ಅವರು ಪದಗಳನ್ನ ಪೋಣಿಸಿದ್ದಾರೆ. ವಿಜಯ್ ಪ್ರಕಾಶ ಮತ್ತು ಚಂದನ್ ಬಾಲ ಕಲ್ಯಾಣ್, ಚಾರು ಹರಿಹರನ್ ಅವರ ದ್ವನಿ ಯಲ್ಲಿ ರಾಮ್ ಚರಣ್ ಅವರ ಪಾತ್ರದ ವ್ಯಕ್ತಿತ್ವವನ್ನ ವರ್ಣಿಸಲಾಗಿದೆ.
ಹಾಡು ಬಿಡುಗಡೆಯಾಗಿ ಒಂದು ರಾತ್ರಿ ಕಳೆಯುವುದರೊಳಗೆ 20 ಲಕ್ಷ ವೀವ್ಸ್ ಪಡೆದುಕೊಂಡು ಯೂ ಟ್ಯೂಬ್ ಟ್ರೆಂಡಿಂಗ್ ಅಲ್ಲಿದೆ.
ಆರ್ ಆರ್ ಆರ್ ಚಿತ್ರ ತಂಡ 7 ದಿನಗಳ ಹಿಂದೆ ಎನ್ ಟಿ ಆರ್ ಪಾತ್ರದ ಇಟ್ರಡಕ್ಷನ್ ಸಾಂಗ್ ಕೊಮುರಂ ಭೀಮುಡೋ ಹಾಡ್ನನ್ನ ಬಿಡುಗಡೆಮಾಡಿತ್ತು. ಆ ಹಾಡು ಸಹ ಸೂಪರ್ ಹಿಟ್ ಆಗಿದೆ.
ಒಮಿಕ್ರಾನ್ ಆತಂಕದ ಮಧ್ಯೆಯೆ ಜನವರಿ 7 ರಂದು ಆರ್ ಆರ್ ಆರ್ ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರದ ಪ್ರಚಾರವನ್ನ ಭರದಿಂದ ಮಾಡುತ್ತಿದ್ದು , ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲಾ ಇಂಡಸ್ಟ್ರಿಗಳಿಗೂ ಬೇಟಿ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.