ಅರುಂಧತಿ ಆಗಮಿಸಿ 13 ವರ್ಷ – ಧನ್ಯವಾದ ತಿಳಿಸಿದ ಜೇಜಮ್ಮ…..
ದಕ್ಷಿಣ ಚಿತ್ರರಂಗದಲ್ಲಿ ಜೇಜಮ್ಮನ ಪಾತ್ರದ ಮೂಲಕ ಸಂಚಲನ ಸೃಷ್ಟಿಸಿದ ಚಿತ್ರ ಅರುಂಧತಿ. ಚಿತ್ರ ಬಿಡುಗಡೆಯಾಗಿ ಇಂದಿಗೆ 13 ಮೂರು ವರ್ಷ.. ನಟಿ ಅನುಷ್ಕಾ ಶೆಟ್ಟಿ ವೃತ್ತಿ ಜೀವನಕ್ಕೆ ಅತಿದೊಡ್ಡ ಬ್ರೇಕ್ ಕೊಟ್ಟ ಸಿನಿಮಾ.
ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ಸೂಪರ್ ನ್ಯಾಚುರಲ್ ಪವರ್ ಹೊಂದಿರುವ ಸಿನಿಮಾ ಈ ಸಿನಿಮಾ ದಕ್ಷಿಣ ಭಾರತದಲ್ಲಿ ಸಿನಿ ಪ್ರೇಮಿಗಳಿಗೆ ಮೋಡಿ ಮಾಡಿತ್ತು. ಈ ಚಿತ್ರದ ಮೂಲಕ ಅನುಷ್ಕಾ ಬಹು ಬೇಡಿಕೆಯ ಸೂಪರ್ ಸ್ಟಾರ್ ಆಗಿ ಬೆಳೆದರು.
ಈ ಕುರಿತು ನಟಿ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಅರುಂಧತಿ ಗೆ 13 ವರ್ಷ ತೊಂಬಿದ ನೆಪದಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಗೆಲುವಿಗೆ ಕಾರಣವಾದವರನ್ನ ನೆನಪಿಸಿಕೊಂಡಿದ್ದಾರೆ. ಯಾವುದೇ ನಟಿ ಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದಂತಹ ಪಾತ್ರ ಜೇಜಮ್ಮ ಅಂಥ ಅವಕಾಶವನ್ನ ನನಗೆ ನೀಡಿದ್ದಕ್ಕೆ ನಾನು ಧನ್ಯಳು. ನಿರ್ದೇಶಕ ಕೋಡಿ ರಾಮಕೃಷ್ಣ ಮತ್ತು ನಿರ್ಮಾಪಕ ಶ್ಯಾಮ್ ಪ್ರಸಾದ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಈ ಸಿನಿಮಾ ಯಾವಾಗಲು ನನ್ನ ಮನಸ್ಸಿಗೆ ಹತ್ತಿರವಾಗಿರಲಿದೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸೋನುಸೂದ್ ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಸೋನು ಸೂದ್ ದಕ್ಷಿಣ ಚಿತ್ರರಂಗದಲ್ಲಿ ಖಳನಾಯಕನಾಗಿ ಮಾರ್ಕೇಟ್ ಹೆಚ್ಚಸಿಕೊಂಡರು. ಸೋನು ಸೂದ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದ ರವಿಶಂಕರ್ ಧ್ವನಿ ಸಿನಿಮಾ ನೋಡುವವರನ್ನ ಬೆಚ್ಚಿ ಬಿಳಿಸಿತ್ತು.
ಸಯ್ಯಾಜಿ ಶಿಂಧೆ, ಮನೋರಮಾ ಸೇರಿದಂತೆ ಹಿರಿಯ ಕಲಾವಿದರ ದಂಡೆ ಸಿನಿಮಾದಲ್ಲಿ ನಟಿಸಿತ್ತು.