ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿ , ನಿರ್ಮಿಸಿರುವ ಶೋಷಿತರಿಗಾಗಿ ಹೋರಾಟದ ಸತ್ಯ ಕಥೆಯಾಧಾರಿತ ಸಿನಿಮಾ ‘ಜೈ ಭೀಮ್’… ಈ ಸಿನಿಮಾಗೆ IMDB ಟಾಪ್ ಟರೇಟಿಂಗ್ಸ್ ನೀಡಿತ್ತು.. ಈ ಮೂಲಕ ರೇಟಿಂಗ್ಸ್ ನಲ್ಲಿ ಜೈ ಭೀಮ್ ಹಾಲಿವುಡ್ ಸಿನಿಮಾಗಳನ್ನ ಹಿಂದಿಟ್ಟಿತ್ತು.. ಒಟಿಟಿಯಲ್ಲಿ ತೆರೆಕಂಡ ಜೈ ಭೀಮ್ ಸೂಪರ್ ಹಿಟ್ ಆಗಿದ್ದ, ಹೊಸ ಅಲೆ ಸಷ್ಟಿಸಿದೆ.. ಯುವಕರನ್ನ ಪ್ರೇರಿಪಿಸಿದ ಈ ಸಿನಿಮಾ ಸಾಕಷ್ಟು ವಿವಾದಗಳ ನಂತರವೂ ಸಹ ಸೆನ್ಷೇಷನ್ ಕ್ರಿಯೇಟ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು..
ಇದೀಗ ಈ ಸಿನಿಮಾಕ್ಕೆ ಆಸ್ಕರ್ ಗೌರವ ನೀಡಿದೆ. ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾದ ಮದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ‘ಜೈ ಭೀಮ್’ ಸಿನಿಮಾಕ್ಕೆ ಸಂದಿದೆ.
‘ಜೈ ಭೀಮ್’ ಸಿನಿಮಾದ ಕೆಲವು ದೃಶ್ಯಗಳು ಆಸ್ಕರ್ ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದೆ. ಸಿನಿಮಾದ ಕೆಲವು ದೃಶ್ಯಗಳ ಜೊತೆಗೆ ಸಿನಿಮಾದಲ್ಲಿ ತೋರಿಸಲಾಗಿರುವ ಇರುಳರ್ ಜನಾಂಗದ ಕುರಿತು, ಸಿನಿಮಾದ ಕುರಿತು ನಿರ್ದೇಶಕ ಟಿ.ಜೆ.ಜ್ಞಾನವೇಲು ಮಾತನಾಡಿರುವ ವಿಡಿಯೋವನ್ನು ಸಹ ಪ್ರಕಟಿಸಲಾಗಿದೆ.
‘ಜೈ ಭೀಮ್’ ಸಿನಿಮಾವು 2022ರ ಗೋಲ್ಡನ್ ಗ್ಲೋಬ್ಗೆ ‘ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ’ ವಿಭಾಗದಲ್ಲಿ ನಾಮಿನೇಟ್ ಆಗಿದೆ.