ಭಾರತದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ ಥ್ರಿಲ್ಲರ್ , ಫ್ಯಾಂಟಸಿ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ.. ಈ ಸಿನಿಮಾ ಜಸ್ಟ್ ಗ್ಲಿಂಪ್ಸ್ ನಿಂದಲೇ ಹಾಲಿವುಡ್ ಲೆವೆಲ್ ಗೆ ಸೌಂಡ್ ಮಾಡಿದೆ.. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋದಕ್ಕೆ ಮತ್ತೊಂದು ಕಾರಣವೂ ಇದೆ.. ಈ ಸಿನಿಮಾ 5 -6 ಅಲ್ಲ ಒಟ್ಟಾರೆ 14 ಭಾಷೆಗಳಲ್ಲಿ ರಿಲೀಸ್ ಆಗ್ತಿದ್ದು ,,, ಈ ವಿಷಯ ದೊಡ್ಡ ದೊಡ್ಡ ಸಿನಿಮಾರಂಗದ ಮಹಾರಥಿಗಳನ್ನೂ ಬೆರಗಾಗಿಸಿದೆ.. ಬುರ್ಜ್ ಖಲೀಫಾದಲ್ಲಿ ಟೈಟಲ್ ಲಾಂಚ್ ಮಾಡಿ ಭಾರತೀಯ ಸಿನಿಮಾರಂಗವನ್ನ ಬೆರಗುಗೊಳಿಸಿದ್ದು ಸೇರಿ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ..
ಆದ್ರೆ ಫೆಬ್ರವರಿ 20 ಕ್ಕೆ ರಿಲೀಸ್ ಆಗಬೇಕಿದ್ದ ಈ ಸಿನಿಮಾಗೆ ಕೋವಿಡ್ ಕಂಟಕ ಎದುರಾಗಿದೆ.. ಆದ್ರೆ ಈ ನಡುವೆ ಈ ಸಿನಿಮಾಗೆ ಒಟಿಟಿಯಿಂದ 100 ಕೋಟಿ ಆಫರ್ ಬಂದಿತ್ತು ಎಂದು ಖುದ್ದು ನಿರ್ಮಾಪಕ ಜಾಕ್ ಮಂಜು ರಿವೀಲ್ ಮಾಡಿದ್ದರು.. ಆಧ್ರೆ 3ಡಿ ತಂತ್ರಜ್ಞಾನದ ಇಂತಹ ಸಿನಿಮಾಗಳು ಥಿಯೇಟರ್ ನಲ್ಲೇ ರಿಲೀಸ್ ಆಗಬೇಕೆಂದು ತಿಳಿಸಿದ್ದರು.. ಇದೀಗ 100 ಕೋಟಿ ಆಫರ್ ತಿರಸ್ಕರಿಸುವುದಾಗಿ ಜಾಕ್ ಮಂಜು ಅವರೇ ತಿಳಿಸಿದ್ದಾರೆ.
ಇನ್ನು ವಿಕ್ರಾಂತ್ ರೋಣ ಚಿತ್ರಕ್ಕೆ 100 ಕೋಟಿ ಆಫರ್ ಬಂದಿದೆಯಾ ಎನ್ನುವ ಶಂಕೆ ಕೆಲವರಲ್ಲಿ ಮೂಡಿತ್ತು. ಇದು ಸುಳ್ಳು ಮಾಹಿತಿ ಅಂತಲೂ ಹಲವರು ಹೇಳಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು 100 ಕೋಟಿ ಆಫರ್ ಬಂದಿದ್ದು ನಿಜ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ರು. ಆದರೆ ಚಿತ್ರವನ್ನು ಥಿಯೇಟರಿನಲ್ಲೇ ರಿಲೀಸ್ ಮಾಡೋಕೆ ನಿರ್ಧರಿಸಿದ್ದ ಕಾರಣ, ಸದ್ಯಕ್ಕೆ ಈ 100 ಕೋಟಿ ಆಫರ್ ರಿಜೆಕ್ಟ್ ಮಾಡಿದ್ದಾರಂತೆ.