ಬಾಲಿವುಡ್ ನ ಸ್ಟಾರ್ ನಟ ವರುಣ್ ಧವನ್ ಅವರ ಕಾರು ಚಾಲಕ ಮನೋಜ್ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮಂಗಳವಾರ (ಜ 18 ) ಈ ಘಟನೆ ನಡೆದಿದ್ದು ವರುಣ್ ಧವನ್, ಚಾಲಕನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನಟ ವರುಣ್ ಧವನ್ ಜೊತೆ ಬಹುದಿನಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಾರ್ ಚಾಲಕ ಮನೋಜ್ ನಟನಿಗೆ ತುಂಬ ಆಪ್ತವಾಗಿದ್ದನು, ಜಾಹಿರಾತು ಚಿತ್ರಿಕರಣವೊಂದರ ಸಲುವಾಗಿ ಅವರನ್ನ ಡ್ರಾಪ್ ಮಾಡಿದ ಬಳಿಕ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ವರುಣ್ ಧವನ್ ಸಹ ಜೊತೆಯಲ್ಲಿದ್ದರು. ಚಾಲಕನಿಗೆ ಹೃದಾಯಾಘಾತವಾದ ಸುದ್ದಿ ತಿಳಿದಿಉ ವರುಣ್ ಚಿತ್ರೀಇಕರಣವನ್ ರದ್ದು ಮಾಡಿ ಆಸ್ಪತ್ರೆಗೆ ತರೆಳಿದ್ದಾರೆ. ಸುದ್ದಿ ತಿಳಿದು ವರಣ್ ಧವನ್ ತಂದೆ ಡೇವಿಡ್ ಧವನ್ ಪುತ್ರನಿಗೆ ಫೋನ್ ಮಾಡಿ ಸಂತೈಸಿದ್ದಾರೆ. ಕಾರು ಚಾಲಕ ಮನೋಜ್ ಅವರ ಕುಟುಂಬದ ಜವಬ್ದಾರಿಯನ್ನ ನೋಡಿಕೊಳ್ಳಲು ವರುಣ್ ಧವನ್ ಮುಂದಾಗಿದ್ದಾರೆ. ನಟನೆ ಮಾತ್ರವಲ್ಲದೆ ಇಂಥಹ ಮಾನವೀಯ ಗುಣಗಳಿಂದ ವರುಣ್ ಜನರ ಮನಸ್ಸು ಗೆದ್ದಿದ್ದಾರೆ. ಅನೇಕ ಹಿಟ್ ಹಿಟ್ ಚಿತ್ರಗಳನ್ನ ನೀಡಿರುವ ವರಣ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ವರುಣ್ ಈಗ ಭೇಡಿಯಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ, ವರುಣ್ ಗ3 ಜೋಡಿಯಾಗಿ ಕೃತಿ ಸನೂನ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಅಮರ್ ಕೌಶಿಕ್ ನಿರ್ದೇಶನ ಮಾಡಲಿದ್ದಾರೆ.