ಪ್ರೀತಿಸಿ ಮದುವೆಯಾಗಿದ್ದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಮಗಳು ಐಶ್ವರ್ಯಾ ಹಾಗೂ ಸ್ಟಾರ್ ನಟ ಧನುಶ್ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಎಳ್ಳುನೀರು ಬಿಟ್ಟಿದ್ದಾರೆ… 18 ವರ್ಷಗಳ ನಂತರ ಡಿವೋರ್ಸ್ ಪಡೆದಿರುವ ಶಾಕಿಂಗ್ ಸತ್ಯವನ್ನ ಧನುಷ್ ಹಾಗೂ ಐಶ್ವರ್ಯ ಇಬ್ರೂ ಸಹ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದರು.. ಈ ಸುದ್ದಿ ಅವರ ಅಭಿಮಾನಿಗಳಿಗೆ ಬರಸಿಡಿಲಂತೆ ಅಪ್ಪಳಿಸಲಿದೆ.. ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.. ಯಾರೂ ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ.. ಯಾಕಂದ್ರೆ ಧನುಶ್ ಹಾಗೂ ಐಶ್ವರ್ಯ ಸದಾ ಒಟ್ಟಾಗಿ ಅನ್ಯೋನ್ಯವಾಗಿಯೇ ಕಾಣಿಸಿಕೊಳ್ತಿದ್ದವರು.. ಆದ್ರೆ ಅವರ ಈ ಧೀಡೀರ್ ನಿರ್ಧಾರ ಎಲ್ರನ್ನೂ ಅಚ್ಚರಿಗೀಡು ಮಾಡಿದೆ..
ಧನುಷ್ ಹಾಗೂ ನಿರ್ಮಾಪಕಿ ಐಶ್ವರ್ಯಾರ ಡಿವೋರ್ಸ್ ಬಳಿಕ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ವಿಡಿಯೋ ನೋಡಿ ಧನುಶ್ ಫ್ಯಾನ್ಸ್ ಮತ್ತಷ್ಟು ಬೇಸರಗೊಂಡಿದ್ದಾರೆ.. ಹೌದು ಈ ವಿಡಿಯೋಯಲ್ಲಿ ಧನುಶ್ ಹಾಗೂ ಐಶ್ವರ್ಯಾ ಪಾರ್ಟಿಯೊಂದ್ರಲ್ಲಿ ಭಾಯಗಿಯಾಗಿದ್ದಾರೆ.. ಆ ಪಾರ್ಟಿಯಲ್ಲಿ ಧನುಶ್ ಪ್ರೀತಿಯಿಂದ ಐಶ್ವರ್ಯಾಗಾಗಿ ಹಾಡು ಹಾಡ್ತಿದ್ದಾರೆ.. ಅದು ಕೂಡ ರಜನಿಕಾಂತ್ ಅವರ ಪೇಟ ಸಿನಿಮಾದ ಹಾಡು ಹಾಡಿದ್ದಾರೆ.. ಧನುಶ್ ಹಾಡಿಗೆ ಐಶ್ವರ್ಯಾ ನಾಚಿ ನೀರಾಗಿದ್ದಾರೆ.. ಹಾಡು ಹಾಡುತ್ತಲೇ ಅವರ ಬಳಿಗೆ ಹೋಗಿರುವ ಧನುಶ್ ಅವರನ್ನ ಪ್ರೀತಿಯಿಂದ ಅಪ್ಪಿದ್ದಾರೆ.. ಈ ವಿಡಿಯೋದಲ್ಲಿ ಅವರ ಅನ್ಯೋನ್ಯತೆ ನೋಡಿರುವ ಅಭಿಮಾನಿಗಳು ಈವರೆಗೂ ಅವರ ವಿಚ್ಛೇಧನದ ಸುದ್ದಿಯ ಶಾಕ್ ನಿಂದ ಹೊರಬರಲಾಗ್ತಿಲ್ಲ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ..