ಬಾಹುಬಲಿ ಸಿನಿಮಾಗೆ ಕಂಪೇರಿಟಿವಿಟಿ ಸಾಧ್ಯವೇ ಇಲ್ಲ… ಸೌತ್ ಇಂಡಿಯಾ ಪವರ್ ಬಾಲಿವುಡ್ ಗೆ ತೋರಿಸಿ ಅದ್ಭುತ ವಿಶ್ಯುಯಾಲಿಟಿ , ಸ್ಟೋರಿ ಸೌಂಡ್ ಕ್ವಾಲಿಟಿ ಇಂದ ಅಂತಾರಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡಿ , ಬಾಕ್ಸ್ ಆಫೀನ್ ನಲ್ಲಿ ರೆಕಾರ್ಡ್ ಮಾಡಿರುವ ಜಕ್ಕಣ್ಣ ( ರಾಜಮೌಳಿ ) ಸಾರಥ್ಯದ , ಪ್ರಭಾಸ್ ನಟನೆಯ ಸಿನಿಮಾ..
ಅಂತೆಯೇ ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದ್ದ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ನಟನೆಯ 3 ಈಡಿಯಟ್ಸ್ ಸಿನಿಮಾ ಕೂಡ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು…
ಆದ್ರೆ ಈ ಎರೆಡೂ ಸಿನಿಮಾಗಳಿಗಿಂತ ,,, ಡಿಸೆಂಬರ್ 17 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸಿರುವ ಅಲ್ಲು ಅಭಿನಯದ ಪುಷ್ಪ ದ ರೈಸ್ ಸಿನಿಮಾ ಗ್ರೇಟ್ ಅಂತೆ… ಹೌದು ಹೀಗೆ ಹೇಳಿರುವ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್..
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಬಾಕ್ಸಾಫೀಸ್ ನಲ್ಲಿ ರೆಕಾರ್ಡ್ ಮಾಡಿದೆ.. ಅದ್ರಲ್ಲೂ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿರುವದೇ ಹೆಚ್ಚು.. ಸುಮಾರು 88 ಕೋಟಿ ಕಲೆಕ್ಷನ್ ಹಿಂದಿ ಅವತರಿಣಿಕೆಯಿಂದಲೇಬಂದಿದೆ..
ಹಾಲಿವುಡ್ ಸಿನಿಮಾ ಸ್ಪೈಡರ್ ಮ್ಯಾನ್ ಭಾರತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಅದರ ಮುಂದೆಯೇ ತೊಡೆ ತಟ್ಟಿ ಅಬ್ಬರಿಸಿದ ಪುಷ್ಪ ಮುಂದೆ ಬಾಲಿವುಡ್ ನ ಬಹುನಿರೀಕ್ಷೆ 83 ಸಿನಿಮಾ ಕೂಡ ಮಂಡಿಯೂರಿದೆ.. ಈ ಕಾರಣಕ್ಕೆ ಆಮಿರ್ ಖಾನ್ ಬಾಹುಬಲಿ, 3 ಈಡಿಯಟ್ಸ್ಗಿಂತಲೂ ಗ್ರೇಟ್ ಎಂದಿದ್ದಾರೆ.
ಹೌದು ಕಾಂಪಿಟೇಷನ್ ಕೆಲವೆಡೆ 50 % ಸೀಟಿಂಗ್ , ಇಷ್ಟೆಲ್ಲಾ ಅಡಚಣೆಗಳಿದ್ರೂ ಪುಷ್ಪ ಈ ಲೆವೆಲ್ ಗೆ ಸದ್ದು ಮಾಡಿದ್ದಕ್ಕೆ ಅಚ್ಚರಿಗೊಂಡಿರುವ ಅಮಿರ್ ಖಾನ್ ಈ ಸಿನಿಮಾವನ್ನ ಬಾಹುಬಲಿ ಹಾಗೂ 3 ಈಡಿಯಟ್ಸ್ ಗಿಂತಲೂ ಹೆಚ್ಚು ಯಶಸ್ಸು ಸಿಕ್ಕಿದೆ ಎಂದಿದ್ದಾರೆ.
ಸದ್ಯ ಅಮಿರ್ ಖಾನ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಇತ್ತೀಚಗೆ ಅವರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶದ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಖಚಿತವಾಗಿದೆ.. ಇದೆಲ್ಲದ್ರ ನಡುವೆ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಬೇಕಿದೆ.. ಏಪ್ರಿಲ್ 14 ಅಂದ್ರೆ ಕೆಜಿಎಫ್ 2 ರಿಲೀಸ್ ದಿನವೇ ರಿಲೀಸ್ ಆಗಲಿದೆ.. ಆದ್ರೆ ಅದೆಷ್ಟರ ಮಟ್ಟಿಗೆ KGF 2 ಗೆ ಟಕ್ಕರ್ ಕೊಡುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ..