ಭಾರತದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಕ್ರೇಜ್ ಹೆಚ್ಚಿಸಿರುವ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ RRR,.. ಎಲ್ಲಾ ಸರಿ ಇದ್ದಿದ್ರೆ , ಸಿನಿಮಾ ಇಷ್ಟೊತ್ತಿಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಬೇಕಾಗಿತ್ತು.. ವಿಶ್ವಾದ್ಯಂತ ಸೌಂಡ್ ಮಾಡಬೇಕಿತ್ತು.. ಅದಕ್ಕೆ ಆಗಲೇ ಸಿನಿಮಾ ತಂಡ ಎಲ್ಲಾ ಕಡೆಗಳಿಗೂ ಹೋಗಿ ಪ್ಯಾನ್ ಇಂಡಿಯಾ ಸಿನಿಮಾದ ಭರ್ಜರಿ ಪ್ರಚಾರವನ್ನೂ ಕೈಗೊಂಡಿತ್ತು.. ಟ್ರೇಲರ್ ರಿಲೀಸ್ , ಸಾಂಗ್ಸ್ ರಿಲೀಸ್ ಮಾಡಿ ಕಾತರತೆ ಹೆಚ್ಚಿಸಿತ್ತು.. ಜನವರಿ 7 ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು.. ಆದ್ರೆ ಕೊರೊನಾ , ಒಮಿಕ್ರಾನ್ ಹೆಚ್ಚಳದ ಭೀತಿಯಿಂದ ಮತ್ತೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಯ್ತು..
ಅಭಿಮಾನಿಗಳು ನಿರಾಸೆಗೊಂಡರೂ ಈ ನಿರ್ಧಾರ ಸರಿಯೇ ಇದೆ ಈಗಿನ ಪರಿಸ್ಥಿತಿ ಹಿನ್ನೆಲೆ ಎಂದು ಒಪ್ಪಿದ್ದಾರೆ.. ಆದ್ರೆ ಇದೀಗ ಪ್ರಶ್ನೆ ಸಿನಿಮಾ ರಿಲೀಸ್ ಆಗುವುದು ಯಾವಾಗ..??? ಅನ್ನೋದು.. ಆದ್ರೀಗ ಟಾಲಿವುಡ್ ಅಂಗಳದಲ್ಲಿ ಹೊಸ ರಿಲೀಸ್ ದಿನಾಂಕದ ಕಬರ್ ಹರಿದಾಡ್ತಿದೆ.. ಮೂಲಗಳ ಪ್ರಕಾರ ಸಿನಿಮಾ ಇದೇ ವರ್ಷ ಏಪ್ರಿಲ್ 29 ಕ್ಕೆ ರಿಲೀಸ್ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.. ಮಾರ್ಚ್ ತಿಂಗಳ ಒಳಗೆ ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಚಿತ್ರವನ್ನು ಏಪ್ರಿಲ್ ನಲ್ಲಿ ರಿಲೀಸ್ ಮಾಡುವ ಯೋಚನೆ ಮಾಡಿದೆ ಚಿತ್ರ ತಂಡ ಎಂದು ಹೇಳಲಾಗ್ತಿದೆ..
ಆದ್ರೆ RRR ರಿಲೀಸ್ ಆಗಿದ್ದೇ ಆದ್ರೆ ಕೆಲ ಸಿನಿಮಾಗಳಿಗೆ ನಷ್ಟವಾಗಬಹುದು,, ಇಲ್ಲ ಸಿನಿಮಾ ರಿಲೀಸ್ ದಿನಾಂಕಗಳನ್ನೇ ಮುಂದೂಡಬಹುದು.. ಮಖ್ಯವಾಗಿ ಏಪ್ರಿಲ್ 14 ಕ್ಕೆ ಕೆಜಿಎಫ್ 2 ಕೂಡ ರಿಲೀಸ್ ಆಗಲಿದೆ.. ಈ ಸಿನಿಮಾ RRR ನಷ್ಟೇ ಕ್ರೇಜ್ ಕ್ರಿಯೇಟ್ ಮಾಡಿದೆ.. ಇಡೀ ಭಾರತೀಯ ಸಿನಿಮಾರಂಗ ಈ ಸಿನಿಮಾಗಾಗಿ ಕಾಯ್ತಿದೆ.. ಆದ್ರೆ RRR ಸಿನಿಮಾ ಏಪ್ರಿಲ್ 29 ಕ್ಕೆ ರಿಲೀಸ್ ಆದ್ರೆ ಕೆಜಿಎಫ್ ಹಾಗೂ RRR ನಡುವೆ ಟಫ್ ಕಾಂಪಿಟೇಷನ್ ಇರಲಿದೆ.. ಈಗಾಗಲೇ ಕೆಜಿಎಫ್ ಗೆ ಟಕ್ಕರ್ ಕೊಡಲೇ ಬೇಕು ಅನ್ನೋ ನಿರ್ಧಾರ ಮಾಡಿ ಅಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಏಪ್ರಿಲ್ 14 ಕ್ಕೆ ರಿಲೀಸ್ ಮಾಡೋದಾಗಿ ಹೇಳಿದ್ದಾರೆ.. ಇದೀಗ RRR ಕೂಡ ರಾಖಿ ಭಾಯ್ ಹವಾ ತಗ್ಗಿಸುವ ಪ್ಲಾನ್ ನಲ್ಲಿದೆ.. ಅಷ್ಟೇ ಅಲ್ಲ ಅಜಯ್ ದೇವಗನ್ ನಿರ್ದೇಶನದ ರನ್ ವೇ ಮತ್ತು ಟೈಗರ್ ಶ್ರಾಫ್ ನಟನೆಯ ಹೀರೋಪಂತಿ 2 ಚಿತ್ರಗಳು ಏಪ್ರಿಲ್ 29ರಂದೇ ರಿಲೀಸ್ ಮಾಡಬೇಕೆಂಬ ನಿರ್ಧಾರದಲ್ಲಿವೆ ಎನ್ನಲಾಗ್ತಿದೆ..