ಯೂಟ್ಯೂಬ್ ಸದ್ಯ ಒಂದು ಇಡೀ ವಿಶ್ವದ ಜನರು , ಮಾಹಿತಿ , ಮನರಂಜನೆಗಾಗಿ ಬಳಸುತ್ತಿರುವ ಅತಿ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿದೆ.. ಯೂಟ್ಯೂಬರ್ಸ್ ( ಕಂಟೆಂಟ್ ಕ್ರಿಯೇಟರ್ಸ್ ) ಹಾಗೂ ಬಳಕೆದಾರರ ( ವೀಕ್ಷಕರು) ನಡುವೆ ಒಂದು ಸಂಬಂಧ ಬೆಳಯುತ್ತದೆ.. ಸಾರ್ವನಿಕರು ಮಾಹಿತಿ , ಮನರಂಜನೆಗೆ ಬಳಸಿದ್ರೆ ,,, ಯೂಟ್ಯೂಬರ್ಸ್ ದುಡ್ಡು ಮಾಡುವುದಕ್ಕಾಗಿ ಅಥವ , ಪ್ರೇರೇಪಿಸುವುದಕ್ಕಾಗಿ ಅವಲಂಬಿತರಾಗಿದ್ದಾರೆ..
ಆದ್ರೆ ಯೂಟ್ಯೂಬ್ ನಲ್ಲಿ ದ್ವೇಷ ಹರಡುವಿಕೆ, ಸುಳ್ಳುಸುದ್ದಿ ಹರಡುವಿಕೆ, ವದಂತಿಗಳ ಹರಡುವಿಕೆಯೂ ನಡೆಯುತ್ತದೆ.. ಕೆಲವೊಮೆಮ ಜನರ ದಿಕ್ಕು ತಪ್ಪಿಸುವ ಕೆಲಸವೂ ಆಗುತ್ತದೆ.. ಇದೀಗ ಸುಳ್ಳು ಸುದ್ದಿ, ದ್ವೇಷ ಹರಡುವ ವೆಬ್ ಸೈಟ್, ಯೂಟ್ಯೂಬ್ ಚಾನೆಲ್ ಬಂದ್ ಮಾಡುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಹೌದು.. ಕೆಲವು ದಿನಗಳ ಹಿಂದಷ್ಟೆ 20 ಯೂಟ್ಯೂಬ್ ಚಾನೆಲ್ಗಳನ್ನು ದೇಶವಿರೋಧಿ ಕಂಟೆಂಟ್ ಅಪ್ಲೋಡ್ ಮಾಡಿದ ಆರೋಪದ ಮೇಲೆ ಡಿಲೀಟ್ ಮಾಡಲಾಗಿತ್ತು. ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇನ್ನೂ ಕೆಲವು ಯೂಟ್ಯೂಬ್ ಚಾನೆಲ್, ವೆಬ್ಸೈಟ್ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ಗಳು ನಾಯಿ ಕೊಡೆಗಳಂತಾಗಿವೆ. ಹಲವು ಮನೊರಂಜನೆ, ಸುದ್ದಿ ಪ್ರಸಾರ, ಮಾಹಿತಿ ಹಂಚಿಕೆ, ಜ್ಞಾನ ಹಂಚಿಕೆ ಇತರೆ ಹಲವು ಕಾರ್ಯಗಳನ್ನು ಯೂಟ್ಯೂಬ್ ಚಾನೆಲ್ಗಳು ಮಾಡುತ್ತಿವೆ. ಜೊತೆಗೆ ಕೆಲವರು ಯೂಟ್ಯೂಬ್ ಚಾನೆಲ್, ವೆಬ್ಸೈಟ್ಗಳನ್ನು ದ್ವೇಷ ಹರಡಿಸಲು ಸಹ ಬಳಸುತ್ತಿದ್ದಾರೆ. ಇಂಥವರ ವಿರುದ್ಧ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.
ಸುಳ್ಳು ಸುದ್ದಿ, ದೇಶದ ವಿರುದ್ಧ ಪಿತೂರಿ, ಸಂಚು, ಪ್ರೊಪಾಗಾಂಡ ಹರಡುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ ಸೈಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದೇನೆ. ಹಲವು ರಾಷ್ಟ್ರಗಳು ಈ ವಿಷಯವಾಗಿ ಜಾಗೃತವಾಗಿವೆ, ಯೂಟ್ಯೂಬ್ ಸಹ ಇಂಥಹಾ ಚಾನೆಲ್ ಗಳನ್ನು ಡಿಲೀಟ್ ಮಾಡಲು ಮುಂದೆ ಬಂದಿದೆ ಎಂದು ಹೇಳಿದ್ದಾರೆ.
ಇಂಥ ದೇಶವಿರೋಧಿ ಯೂಟ್ಯೂಬ್ ಚಾನೆಲ್ಗಳನ್ನು ಪತ್ತೆ ಹಚ್ಚಲು ಅದರ ಹಿಂದೆ ಕೆಲಸ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಗುಪ್ತಚರ ಇಲಾಖೆಯ ಸಹಾಯ ಪಡೆದಿದ್ದು, ಡಿಸೆಂಬರ್ ತಿಂಗಳಲ್ಲಿ ಸುಳ್ಳು ಸುದ್ದಿ, ದೇಶದ ವಿರುದ್ಧ ಪ್ರಚಾರ ಮಾಡುತ್ತಿದ್ದ 20 ಯೂಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್ ಸೈಟ್ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಭವಿಷ್ಯದಲ್ಲಿ ಸಹ ದೇಶದ ವಿರುದ್ಧ ಪ್ರಚಾರ ಮಾಡುವ, ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡಿಸುವ, ಸಂಚು ರೂಪಿಸುವ, ದ್ವೇಷ ಹರಡಲು ಯತ್ನಿಸುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ಸೈಟ್ಗಳನ್ನು ಬಂದ್ ಮಾಡಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.