ಹಾಲಿವುಡ್ ನಲ್ಲಿ ಮಿಂಚುತ್ತಿರುವ ಬಾಲಿವುಡ್ ನ ಸ್ಟಾರ್ ನಟಿ , ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಖ್ಯಾತ ಪಾಪ್ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾಗಿ ಅಮೆರಿಕಾದಲ್ಲೇ ಪತಿ ಜೊತೆಗೆ ಸೆಟಲ್ ಆಗಿದ್ದಾರೆ… ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ಅನೇಕ ಖಾಸಗಿ ಶೋಗಳು , ಸಂದರ್ಶನಗಳಲ್ಲಿ ಭಾಗಿಯಾಗ್ತಿರುತ್ತಾರೆ. ಈ ನಡುವೆ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್ ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಮಂಗಳ ಸೂತ್ರವನ್ನು ಧರಿಸಿದಾಗ ಏನನ್ನಿಸಿತು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ನಾನು ಮಂಗಳಸೂತ್ರವನ್ನು ಮೊದಲ ಬಾರಿಗೆ ಧರಿಸಿದ ಸಂದರ್ಭ ನನಗಿನ್ನೂ ನೆನಪಿದೆ. ಏಕೆಂದರೆ ಮಂಗಳಸೂತ್ರದ ಅರ್ಥ ಏನು ಎಂಬುದರ ಬಗ್ಗೆ ಕಲ್ಪನೆ ಮಾಡಿಕೊಂಡೇ ಬೆಳೆದಿದ್ದೇನೆ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು. ಅದೇ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಇದರ ಅರ್ಥದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದಿದ್ದಾರೆ..
ನಾನು ಮಂಗಳಸೂತ್ರ ಧರಿಸಲು ಇಷ್ಟಪಡುತ್ತೇನೋ ಅಥವಾ ಪಿತೃಪ್ರಧಾನಕ್ಕೆ ಒಳಗಾಗುತ್ತೇನೋ? ಆದರೆ ಅದೇ ಸಂದರ್ಭದಲ್ಲಿ ನನಗನ್ನಿಸಿದ್ದು ನಾನು ಇವೆರಡೂ ತಲೆಮಾರಿನ ಮಧ್ಯದಲ್ಲಿರುತ್ತೇನೆ ಎಂದು. ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಯಾರು ಹಾಗೂ ಯಾವ ಕಾರಣಕ್ಕೆ ಇಲ್ಲಿ ನಿಂತಿರುವಿರಿ ಎಂಬುದನ್ನೂ ತಿಳಿದುಕೊಳ್ಳಬೇಕು. ಮುಂದಿನ ಪೀಳಿಗೆಯ ಹುಡುಗಿಯರು ಭಿನ್ನವಾಗುವುದನ್ನು ನಾವು ನೋಡುತ್ತೇವೆ ಎಂದು ಕಾಣಲಿದ್ದೇವೆ ಎಂದಿದ್ದಾರೆ..